– ಶಾಲಾ ಕಾಲೇಜುಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಅಗತ್ಯ – ಉಲ್ಲಂಘಸಿದ್ದಲ್ಲಿ ನೋಟಿಸ್ ನಂತರ ಶಿಕ್ಷೆಗೆ ಒಳಪಡಿಸಲಿ

ರಾಜ್ಯಾದ್ಯಂತ ಸುದ್ದಿಯಲ್ಲಿರುವ ಹುಲಿ ಉಗುರು ವಿಚಾರಕ್ಕೆ ಸಂಬಂಧಿಸಿದಂತೆ ಅ.27 ರಂದು ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಕೆಪಿಸಿಸಿ ವಕ್ತಾರರಾದ ಸುಧೀರ್ ಕುಮಾರ್ ಮುರೊಳ್ಳಿ ಅವರು ಮಾತನಾಡಿ ಹುಲಿ ಉಗುರು,ಚರ್ಮ,ದಂತ,ಜಿಂಕೆಯತಲೆ ಹೀಗೆ ಇದಕ್ಕೆ ಸಂಬಂಧಿಸಿದ ಯಾವುದೇ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಅರಣ್ಯ ಕಾಯ್ದೆಯ ಪ್ರಕಾರ ಅಪರಾಧವಾಗಿರುತ್ತದೆ.

ಇದೀಗ ಅರಣ್ಯ ಅಧಿಕಾರಿಗಳು ಹಲವು ಕಡೆ ಸೆಲೆಬ್ರಿಟಿಗಳನ್ನು,ಮಠಾಧೀಶರನ್ನ,ಅರ್ಚಕರ ಮನೆಗಳ ಶೋಧ ನಡೆಸಿ ಕೆಲವರನ್ನು ಬಂಧಿಸಿರುವುದು ಬೆಳಕಿಗೆ ಬಂದಿದೆ. ಆದರೆ ಅರಣ್ಯ ಇಲಾಖೆಯವರು ಗಮನಿಸಬೇಕಾದ ವಿಚಾರವೆಂದರೆ ಈ ಹಳ್ಳಿ ಭಾಗದಲ್ಲಿ ಹಲವಾರು ಮನೆಗಳಲ್ಲಿ ನೂರಾರು ವರ್ಷಗಳ ಹಿಂದಿನ ಜಿಂಕೆಯ ತಲೆ, ಕಾಡುಕೋಣದ ತಲೆ ಹೀಗೆ ಹಲವು ವಸ್ತುಗಳನ್ನು ಹವ್ಯಾಸದಿಂದಾಗಿ ಹಾಗೂ ಪೂರ್ವಜರ ಕಾಲದ ವಸ್ತುಗಳು ಎಂದು ನೆನಪಿನಲ್ಲಿಟ್ಟುಕೊಳ್ಳವ ದೃಷ್ಟಿಯಿಂದ ಇಂದು ಕೂಡ ಹಲವು ಮನೆಗಳಲ್ಲಿ ಹಲವು ರೀತಿಯ ಪ್ರಾಣಿಗಳ ವಸ್ತುಗಳು ಇವೆ.
ಅರಣ್ಯಾಧಿಕಾರಿಗಳು ಏಕಾಏಕಿ ಈ ವಸ್ತುಗಳನ್ನು ಸಂಗ್ರಹಿಸಿ ಅವರುಗಳನ್ನು ಬಂಧಿಸುವ ಬದಲು ಇಂತಹ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಅರಣ್ಯ ಕಾಯ್ದೆಯ ಪ್ರಕಾರ ಅಪರಾಧ ಎಂದು ಜನರಿಗೆ ಅರಿವು ಮೂಡಿಸುವ ಕೆಲಸಕ್ಕೆ ಅರಣ್ಯಾಧಿಕಾರಿಗಳು ಮೊದಲು ಮುಂದಾಗಬೇಕು.

ತದನಂತರವು ಯಾರಾದರೂ ಆ ವಸ್ತುಗಳನ್ನು ಮನೆಯಲ್ಲೇ ಇಟ್ಟುಕೊಂಡಿದ್ದರೆ ನಿಮ್ಮ ಕಾಯ್ದೆಯ ಪ್ರಕಾರ ಅವರುಗಳ ಮೇಲೆ ಯಾವುದೇ ರೀತಿಯ ಕ್ರಮವನ್ನು ತೆಗೆದುಕೊಳ್ಳುವುದರಲ್ಲಿ ನಮ್ಮ ಆಕ್ಷೇಪವಿಲ್ಲ. ಆದರೆ ಹಳ್ಳಿಯ ಜನರು ಮುಗ್ಧರು, ಇವುಗಳನ್ನು ಮನೆಯಲ್ಲಿ ಇಟ್ಟುಕೊಂಡರೆ ಅಪರಾಧ ಎಂಬ ಅರಿವು ಸಹ ಇಲ್ಲದ ಜನರಿಗೆ ಮೊದಲು ಅರಿವು ಮೂಡಿಸುವುದು, ಶಾಲಾ ಕಾಲೇಜುಗಳಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು ಒಳ್ಳೆಯದು. ಕಾಡುಪ್ರಾಣಿಗಳ ಉಗುರು ಚರ್ಮ ಸೇರಿದಂತೆ ಯಾವುದೇ ವಸ್ತುಗಳನ್ನು ಸಂಗ್ರಹಿಸಿಡುವುದಕ್ಕೆ ನನ್ನ ವಿರೋಧವಿದೆ. ಆದರೆ ನಾವುಗಳು ವಾಸ್ತವ ಸ್ಥಿತಿಯನ್ನು ಅರಿತು ಮೊದಲು ಜನರಿಗೆ ಅವರ ತಪ್ಪಿನ ಕುರಿತು ಅರಿವು ಮೂಡಿಸಿ ಮುಂದಿನ ಕಾನೂನು ಕ್ರಮಕ್ಕೆ ಅರಣ್ಯ ಅಧಿಕಾರಿಗಳು ಮುಂದಾಗಲಿ ಎಂದ ಅವರು ಶೃಂಗೇರಿ ಕ್ಷೇತ್ರದ ಶಾಸಕರಾದ ಟಿ.ಡಿ. ರಾಜೇಗೌಡರು ಸಹ ಈ ವಿಚಾರವನ್ನು ಈಗಾಗಲೇ ಅರಣ್ಯಾಧಿಕಾರಿಗಳು ಹಾಗೂ ಅರಣ್ಯ ಸಚಿವರ ಗಮನಕ್ಕೆ ತಂದಿದ್ದು ಈ ತರಹದ ಯಾವುದೇ ದೂರು ಬಂದಲ್ಲಿ ಮೊದಲು ಅವರಿಗೆ ನೋಟಿಸ್ ನೀಡಿ ತದನಂತರ ಮುಂದಿನ ಕಾನೂನು ಕ್ರಮ ಕೈಗೊಳ್ಳಿ ಏಕಾಏಕಿ ಬಂದಿಸುವುದು ಸರಿಯಲ್ಲ ಎಂಬುದನ್ನು ತಿಳಿಸಿರುತ್ತಾರೆ. ಸುದ್ದಿಗೋಷ್ಠಿಯಲ್ಲಿ ನುಗ್ಗಿ ಮಂಜುನಾಥ್, ಈನೇಶ್, ಜೆ ಎಂ ಶ್ರೀಹರ್ಷ, ನಾರ್ವೆ ನಿಸಾರ್, ಸಂತೋಷ್ ಕುಲಾಸು, ಶ್ರೀಜಿತ್, ಕೀರ್ತಿ ಕುಮಾರ್ ಇದ್ದರು.

Leave a Reply

Your email address will not be published. Required fields are marked *