Oplus_131072
Oplus_131072

ಶಿವಮೊಗ್ಗ: ಭದ್ರಾವತಿಯ ಬಾರಂದೂರು ಕ್ರಾಸ್ ಬಳಿ ಭೀಕರ ಅಫಘಾತ ನಡೆದಿದ್ದು, ಮೆಡಿಕಲ್ ವಿದ್ಯಾರ್ಥಿನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಭದ್ರಾವತಿ ತಾಲೂಕಿನ ಬಾರಂದೂರು ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಹಾಗೂ ಟ್ರಾಕ್ಟರ್ ನಡುವೆ ಅಪಘಾತ ನಡೆದಿದ್ದು,

ಓರ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ. ತರೀಕೆರೆ ಮೂಲದ ಕೃತಿ(21) ಮೃತ ದುರ್ದೈವಿ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಸಮೀಪದ ಅಮೃತಪುರದ ಕೃತಿ, ಶಿವಮೊಗ್ಗದ ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಬಿಬಿಎಸ್ ಓದುತ್ತಿದ್ದಳು. ಇಂದು ಶಿವಮೊಗ್ಗದಿಂದ ಊರಿಗೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

Oplus_131072

ಉಳಿದಂತೆ ಕಾರಿನಲ್ಲಿದ್ದ ಮೂವರು ಹಾಗೂ ಟ್ರಾಕ್ಟರ್ ಚಾಲಕನಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ತೀವ್ರತೆಗೆ ಟ್ರಾಕ್ಟರ್ ಕೂಡ ಪಲ್ಟಿಯಾಗಿದ್ದು, ಕಾರು ಸಹ ಜಖಂಗೊಂಡಿದೆ. ಈ ಸಂಬಂಧ ಕಾಗದ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ : ಅಕ್ಷಯ್ ಕುಮಾರ್

Leave a Reply

Your email address will not be published. Required fields are marked *