- ಹುಲಿ ಉಗುರು ಕೇಸ್ ನಲ್ಲಿ ಬಂಧನದ ಹಿನ್ನಲೆ
- ಕಲರ್ಸ್ ಕನ್ನಡ ವಾಹಿನಿ ಕಾರು ಕಾದಿದ್ದು ಯಾರನ್ನ?

ಕನ್ನಡ ಬಿಗ್ ಬಾಸ್ ಸೀಸನ್ 10 ಸ್ಪರ್ಧಿಯಾಗಿದ್ದ ವರ್ತೂರು ಸಂತೋಷ್ ರನ್ನು ಹುಲಿ ಉಗುರನ್ನೊಳಗೊಂಡ ಆಭರಣ ಧರಿಸಿದ್ದ ಕಾರಣ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದರು. ಭಾನುವಾರ ತಡರಾತ್ರಿ ಬಂಧನಕ್ಕೊಳಗಾಗಿದ್ದ ಬಿಗ್‌ಬಾಸ್ ರಿಯಾಲಿಟಿ ಶೋ ಸ್ಪರ್ಧಿ ವರ್ತೂರು ಸಂತೋಷ್ ಗೆ 27 ಅಕ್ಟೋಬರ್ 2023 ಜಾಮೀನು ಸಿಕ್ಕಿದೆ. ಜೊತೆಗೆ ಅವರ ಆಪ್ತ ಬಳಗ ಹಾಗೂ ಅಭಿಮಾನಿಗಳು ಸಂಭ್ರಮದಲ್ಲಿದ್ದಾರೆ.
ಸಂತೋಷ್ ಈಗ ಮತ್ತೆ ಬಿಗ್ ಬಾಸ್ ಶೋಗೆ ಮರಳಬಹುದೇ ಎಂಬುದು ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆಯಾಗಿದ್ದು ಇದೆ ವೇಳೆ ಜಾಮೀನು ಸಿಕ್ಕ ಸುದ್ದಿ ಜೊತೆಗೆ ಜೈಲು ಬಳಿ ಕಲರ್ಸ್ ಕನ್ನಡದ ಕಾರು ಪ್ರತ್ಯಕ್ಷವಾಗಿದೆ. ಹಾಗಿದ್ರೆ ಮತ್ತೆ ಬಿಗ್ ಬಾಸ್‌ಗೆ ಹೋಗ್ತಾರಾ ಎಂದು ಪ್ರಶ್ನೆ ಎಲ್ಲರಲ್ಲೂ ಕಾಡಿದಂತೂ ನಿಜ.