Oplus_131072
Oplus_131072

ತೀರ್ಥಹಳ್ಳಿ : ತಾಲೂಕಿನ ನಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾರ್ಡರಗದ್ದೆ ಸಮೀಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತೆಮ್ಮೆಮನೆ ಶಾಲೆಯಲ್ಲಿ ದಿ. 07 ರ ಶುಕ್ರವಾರ ಶಾರದಾ ಪೂಜೆ ಹಾಗೂ ಸತ್ಯನಾರಾಯಣ ಪೂಜೆ ಬಹಳ ವಿಜೃಂಭಣೆಯಿಂದ ನೆರವೇರಿತು.ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಗಿರೀಶ್ ಗೌಡ ಹುರುಳಿ ಹಾಗೂ ವೇದಿಕೆಯಲ್ಲಿದ ಗಣ್ಯರು ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಅನಿತಾ ನೆರವೇರಿಸಿದರು.ಸ್ವಾಗತ ಭಾಷಣವನ್ನು ಕು. ಸ್ವಾತಿ ಮಾಡಿದರು ಶಾಲೆಯ ಮುಖ್ಯೋಪಾಧ್ಯಯರಾದ ಪ್ರಭಾಕರ್ ರವರು ಪ್ರಸ್ತಾವಿಕ ನುಡಿಯನ್ನಾಡಿದರು.

ಇದೇ ಸಂದರ್ಭದಲ್ಲಿ ಅಡುಗೆ ಸಿಬ್ಬಂದಿಯವರಾದ ಶ್ರೀಮತಿ ಕಲಾವತಿ ಹಾಗೂ ಮಾಜಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಪ್ರಕಾಶ್ ಇವರಿಗೆ ಶಾಲೆಯ ಪರವಾಗಿ ಸನ್ಮಾನಿಸಲಾಯಿತು.7ನೇ ತರಗತಿ ಮಕ್ಕಳಿಗೆ ಬೀಳ್ಕೊಡುಗೆ ಸಮಾರಂಭ ವಿದ್ದು ಮಕ್ಕಳ ಮುಂದಿನ ಶೈಕ್ಷಣಿಕ ಬದುಕಿಗೆ ಹಾರೈಸಿದ್ದು, ಈ ವೇಳೆ 7 ನೇ ತರಗತಿಯ ಮಕ್ಕಳ ಭಾವುಕರಾಗಿ ಮಾತನಾಡಿ ತಮ್ಮ ಅನಿಸಿಕೆ ಅಭಿಪ್ರಾಯ ಹಂಚಿಕೊಂಡರು.

2024- 25ನೇ ಸಾಲಿನ ಉತ್ತಮ ವಿದ್ಯಾರ್ಥಿಯಾಗಿ 7ನೇ ತರಗತಿಯ ಕಾರ್ತಿಕ್ ಎಂ ಆರ್ ಬಹುಮಾನ ಪಡೆದುಕೊಂಡರು.ಶಾಲೆಯ ಕಾರ್ಯಕ್ರಮಕ್ಕೆ ಹಿರಿಯ ವಿದ್ಯಾರ್ಥಿಗಳ ಸಹಕಾರವನ್ನು ಸ್ಥಳೀಯರು ನೆನಪಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

Oplus_131072

ಕಾರ್ಯಕ್ರಮದಲ್ಲಿ ಸಮಾಜ ಸೇವಕರು, ಗ್ರಾಮ ಪಂಚಾಯತ್ ಸದಸ್ಯರಾದ ಶಶಾಂಕ್ ಹೆಗ್ಡೆ, ನಾಲೂರು ಗ್ರಾಂ ಪಂ ಸದಸ್ಯ ಸಂದೀಪ್ ಬೋಬ್ಬಿ, ಮಾನವ ಹಕ್ಕು ಆಯೋಗದ ಕಾರ್ಯದರ್ಶಿಗಳಾದ ಶಾಲಿನಿ, ಸ.ಹಿ.ಪ್ರ ಶಾಲೆ ನಾಲೂರು ಮುಖ್ಯ ಶಿಕ್ಷಕಿ ಶ್ರೀಮತಿ ಜಯಂತಿ ನಾಗೇಶ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ಅಧ್ಯಕ್ಷರಾದ ಭಾಸ್ಕರಾಚಾರ್, ಸೇವಾಪ್ರತಿನಿಧಿ ರಾಮು, ರಾಘವೇಂದ್ರ ಭಟ್ ಕೊಕ್ಕೊಡು, ಶಾಲೆಯ ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಶ್ರೀಮತಿ ಸುಜಾತ, ಪ್ರದೀಪ್ ಶಿವಳ್ಳಿ, ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಪವಿತ್ರ,ಎಸ್ ಡಿ ಎಂ ಸಿ ಸದಸ್ಯರಾದ ಯಜ್ಞನಾರಾಯಣ ಭಟ್, ಹೊನ್ನೇತಾಳು ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಶಿಲ್ಪಾ, ಹಾಗೂ ತೆಮ್ಮೆಮನೆ ಶಾಲೆಯ ಶಿಕ್ಷಕಿಯರು, ಮಕ್ಕಳು, ಪೋಷಕರು ಹಳೆಯ ವಿದ್ಯಾರ್ಥಿಗಳು ಇದ್ದರು. ಕಾರ್ಯಕ್ರಮದ ವಂದನಾರ್ಪಣೆಯನ್ನು ಶ್ರೀಮತಿ ಪೂರ್ಣಿಮಾ ನಡೆಸಿಕೊಡುವ ಮೂಲಕ ಕಾರ್ಯಕ್ರಮ ಯಶಸ್ವಿಯಾಗಿ ತೆರೆಕಂಡಿತು.

Leave a Reply

Your email address will not be published. Required fields are marked *