
ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಮತ್ತು ಅವರ ಸಹಗಗನಯಾತ್ರಿ ಬುಚ್ ವಿಲ್ಮೋರ್ ಇದೇ ತಿಂಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ವಾಪಸ್ ಭೂಮಿಗೆ ಬರುವುದು ಖಚಿತವಾಗಿದೆ ಎಂದು ನಾಸಾ ಮೂಲದಿಂದ ತಿಳಿದು ಬಂದಿದೆ.

ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಕಳೆದ 9 ತಿಂಗಳಿನಿಂದ ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿದ್ದಾರೆ. ಈಗ ಅವರನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ತರಲು, ನಾಸಾ ಮತ್ತು ಸ್ಪೇಸ್ಎಕ್ಸ್ ಮಾರ್ಚ್ 14 ರಂದು ಫಾಲ್ಕನ್ 9 ರಾಕೆಟ್ ಮೂಲಕ ಕ್ರೂ-10 ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ.

ಈ ಕಾರ್ಯಾಚರಣೆಯ ಉಪಗ್ರಹದಲ್ಲೇ ಭೂಮಿಗೆ ಮತ್ತೆ ಮರಳಲಿದ್ದಾರೆ.ಇನ್ನು ಮಾ 19 ರಂದು ಬಾಹ್ಯಕಾಶದಿಂದ ಹೊರಡಲಿದ್ದು 3 ರಿಂದ 4 ದಿನದ ಒಳಗೆ ಭೂಮಿಗೆ ಮರಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.



Hi
Hii