- ಪ್ರವರ ತಂಡದಿಂದ ಚಿತ್ರತಂಡಕ್ಕೆ ಸನ್ಮಾನ
- ಮಲೆನಾಡಿನವರ ಚಿತ್ರವನ್ನು ನೋಡಿ ಹಾರೈಸಿ

*ಶಿವಮೊಗ್ಗ* :ಮಲೆನಾಡಿನ ಭರವಸೆಯ ನಿರ್ದೇಶಕರಾದ ರಮೇಶ್ ಬೇಗಾರು ಅವರ ಚೊಚ್ಚಲ ಚಿತ್ರ ಈಗಾಗಲೇ ತೆರೆ ಕಂಡು ರಾಜ್ಯದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ.ಪರಿಸರ ಕಾಳಜಿ ಮತ್ತು ರಕ್ಷಣೆಯ ವಿಚಾರವನ್ನು ಹೊಂದಿದ ಸಾಮಾಜಿಕ ಸಂದೇಶದ ಚಿತ್ರ ಜಲಪಾತ.ಮಲೆನಾಡ ಭಾಷೆ,ಸಂಸ್ಕೃತಿ ಮತ್ತು ಪ್ರಕೃತಿಯ ಹಿನ್ನೆಲೆಯಲ್ಲಿ ಫ್ಯಾಮಿಲಿ ಡ್ರಾಮ ಶೈಲಿಯ ಕಥೆಯನ್ನು ಹೊಂದಿದ್ದು ಕಲಾವಿದ ಮತ್ತು ತಂತ್ರಜ್ಞರೆಲ್ಲರೂ ಮಲೆನಾಡಿಗರೇ ಆಗಿದ್ದಾರೆ.ಪದವಿ ಪೂರ್ವ ಖ್ಯಾತಿಯ ರಜನೀಶ್ ಪೂರ್ಣ ಪ್ರಮಾಣದ ನಾಯಕನಾಗಿ ನಟಿಸಿದ್ದು ಶೃಂಗೇರಿ ಯ ರಂಗಪ್ರತಿಭೆ ನಾಗಶ್ರೀ ಬೇಗಾರ್ ನಾಯಕಿಯಾಗಿದ್ದಾರೆ.

ಇನ್ನು ಇದೆ ವೇಳೆ ಚಿತ್ರ ತಂಡಕ್ಕೆ ಹರಿಹರಪುರದವರಾದ *ಪ್ರವರ* ತಂಡ ಮಲೆನಾಡಿನ ಪ್ರತಿಭೆಗಳಿಗೆ ಪ್ರೋತ್ಸಾಹಿಸೋ ನಿಟ್ಟಿನಲ್ಲಿ ಸನ್ಮಾನ ಮಾಡಿದ್ದು ಇತರರಿಗೆ ಮಾದರಿಯಾಗಿದ್ದಾರೆ.ಪ್ರವರ ತಂಡಕ್ಕೆ ಜಲಪಾತ ತಂಡ ಧನ್ಯವಾದ ತಿಳಿಸಿದ್ದಾರೆ. ಜೊತೆಗೆ ಹಲವೆಡೆ ಪ್ರವರ ತಂಡಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಮಲೆನಾಡಿನ ಚಿತ್ರ ಜಲಪಾತ ವನ್ನು ಪ್ರೇಕ್ಷಕ ಪ್ರಭುಗಳು ಚಿತ್ರಮಂದಿರಕ್ಕೆ ಹೋಗಿ ನೋಡಿ ಕಲಾವಿದರನ್ನು ಆಶೀರ್ವದಿಸಬೇಕಾಗಿ ಸತ್ಯಶೋಧ ಮಾಧ್ಯಮದ ಆಶಯ.