– ಕೊಪ್ಪ ತಾಲೂಕಿನ ಪ್ರತಿಭೆ ಶಿವಾನಿ
– ಶಿವಾನಿ ಆಲ್ ದಿ ಬೆಸ್ಟ್

ಹೆಮ್ಮೆಯ ಮಗಳು ಶಿವಾನಿ ಯವರು ರಾಜ್ಯೋತ್ಸವ ಪ್ರಶಸ್ತಿಗೆ ಬಾಜನರಾಗಿರುವುದು ಕೊಪ್ಪ ತಾಲೂಕಿಗೆ ಹೆಮ್ಮೆಯ ವಿಚಾರವಾಗಿದೆ. ನಮ್ಮೂರು ಪುಟ್ಟ ಊರಾದರೂ ಕಲೆ ವಿಚಾರಕ್ಕೆ ಬಂದರೆ ಹಲವಾರು ವ್ಯಕ್ತಿಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಆ ನಿಟ್ಟಿನಲ್ಲಿ ನಮ್ಮೂರಿನ ಹೆಮ್ಮೆಯ ಪುತ್ರ ನವೀನ್ ಚಂದ್ರ ಕೂಡ ಒಬ್ಬರು. ಇದೀಗ ಅವರ ಪುತ್ರಿ ಶಿವಾನಿಯವರು ಸಹ ತನ್ನ ಪ್ರತಿಭೆಯ ಮುಖಾಂತರ ರಾಜ್ಯದ ಜನತೆಯ ಮನ ಗೆದ್ದಿದ್ದಾಳೆ. ಇವರು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವುದು ನಮಗೆಲ್ಲ ಸಂತಸ ತಂದಿದ್ದು ಶಿವಾನಿಯವರು ಮುಂದಿನ ದಿನಗಳಲ್ಲಿ ಇನ್ನೂ ಎತ್ತರಕ್ಕೆ ಏರುವ ಮೂಲಕ ದೊಡ್ಡ ಪ್ರತಿಭೆಯಾಗಿ ಗುರುತಿಸಿಕೊಳ್ಳಲಿ ಎಂಬುದೇ ನಮ್ಮ ಹಾರೈಕೆ.

ಒಂದು ಸುಂದರ ಕಾರ್ಯಕ್ರಮದಲ್ಲಿ ಕಲೆ ಮತ್ತು ಸಂಸ್ಕೃತಿ ವಿಚಾರದಲ್ಲಿ ಹೆಚ್ಚಿನ ಪ್ರೋತ್ಸಾಹ ನೀಡುವ ಶೃಂಗೇರಿ ಕ್ಷೇತ್ರದ ಹೆಮ್ಮೆಯ ಶಾಸಕರಾದ ಟಿ.ಡಿ. ರಾಜೇಗೌಡರ ಸಮ್ಮುಖದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ನಾವೆಲ್ಲರೂ ಸೇರಿ ನಮ್ಮೂರಿನ ಈ ತಾಜಾ ಪ್ರತಿಭೆ ಶಿವಾನಿಯವರನ್ನು ಅಭಿನಂದಿಸಲು ಒಂದಾಗೋಣ.ಎಂದು ಸತ್ಯಶೋಧ ಮಾಧ್ಯಮದ ಮೂಲಕ ನುಗ್ಗಿ ಮಂಜುನಾಥ್ (ಗೌರವಾಧ್ಯಕ್ಷರು ಸಮನ್ವಯ ಆಟೋ ಚಾಲಕರ ಸಂಘ ಕೊಪ್ಪ.)ತಿಳಿಸಿದ್ದಾರೆ.