
ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಯುವಕರಲ್ಲಿ ಓರ್ವ ಸಾವನ್ನಪ್ಪಿದ್ದು ಯುಗಾದಿ ಹಬ್ಬದ ದಿನವೇ ಬಲಿ ಪಡೆದಂತಾಗಿದೆ.

ಕಿರಣ್ (20) ಮೃತಪಟ್ಟ ದುರ್ದೈವಿ. ತಾಲೂಕಿನ ಜಿಗಳಗೊಡು ಸಮೀಪದ ನಾಲ್ವರು ಯುವಕರು ತುಂಗಾ ನದಿಯಲ್ಲಿ ಈಜಲು ತೆರಳಿದ್ದಾರೆ.

ಜಾಸ್ತಿ ನೀರು ಇಲ್ಲದಿದ್ದರೂ ಹಬ್ಬ, ಅಮಾವಾಸ್ಯೆ, ಹುಣ್ಣಿಮೆ ಸಂದರ್ಭದಲ್ಲಿ ನೀರಿಗೆ ಇಳಿಯುವುದು ಅಪಾಯಕಾರಿ ಎಂಬ ವಿಷಯ ಅರಿವಿದ್ದರೂ ತಿಳಿಯದೆ ಎಂತಹ ಅವಘಡ ಬೇಕಾದರೂ ನಡೆಯುತ್ತದೆ ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆ.




