Oplus_131072

ತೀರ್ಥಹಳ್ಳಿ : ತಾಲೂಕಿನ ಮಾದರಿ ಶಾಲೆಯಲ್ಲಿ ಒಂದಾದ ಹೊನ್ನೇತಾಳು ಶಾಲೆಯಲ್ಲಿ ಬೇಸಿಗೆ ಶಿಬಿರ ಕಾರ್ಯಕ್ರಮ ಹಾಗೂ ತಾಲೂಕಿನ 25 ಶಾಲೆಗಳಿಗೆ ಬೆಂಚ್, ಡೆಸ್ಕ್, ಗ್ರೀನ್ ಬೋರ್ಡ್, ನಲಿಕಲಿ ಟೇಬಲ್ ವಿತರಣೆ ಕಾರ್ಯಕ್ರಮ ವು ಯಶಸ್ವಿಯಾಗಿ ನೆರವೇರಿತು.ಕಾರ್ಯಕ್ರಮದ ಉದ್ಘಾಟನೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಯವರಾದ ಗಣೇಶ್ ವೈ ರವರು ನೆರವೇರಿಸಿದರು. ಕು. ಶಕ್ತಿ ಪ್ರಾರ್ಥನೆಯನ್ನು ಹಾಡಿ ಕಾರ್ಯಕ್ರಮ ಶುರು ಮಾಡಿದ್ದು, ಹೊನ್ನೇತಾಳು ಶಾಲೆಯ ಮುಖ್ಯೋಪಾಧ್ಯಾಯರಾದ ಶಿಲ್ಪಾರವರು ಸ್ವಾಗತ ಭಾಷಣ ಮಾಡಿದರು.ಸ್ವಯಂ ಪ್ರೇರಣಾ ಟ್ರಸ್ಟ್ (ರಿ) ಕಮ್ಮರಡಿ ಇವರ ಸಹಭಾಗಿತ್ವದಲ್ಲಿ ವಿವಿಧ ಶಾಲೆಗಳಿಗೆ ಬೆಂಚ್ ಡೆಸ್ಕ್, ಗ್ರೀನ್ ಬೋರ್ಡ್ ಹಾಗೂ ಇತರ ಪರಿಕರಗಳನ್ನು ಬೆಂಗಳೂರಿನ ಎನ್ ಜಿ ಒ ಸಂಸ್ಥೆ Relyon softech ltd ನ ನರೇಂದ್ರ ಇವರ ಮೂಲಕ ನೀಡಲಾಯಿತು.

ಈ ವೇಳೆ ಶಾಲೆಯ ಮಕ್ಕಳಿಗೆ ವಿಶೇಷ ಮಾಹಿತಿ ಕಾರ್ಯಾಗಾರ ವಿದ್ದು ಕಾಳಿಂಗ ಪೌಂಡೇಶನ್ ನವರಾದ ಅಜಯ್ ಚೈನೀಸ್ ವಿಸ್ಪರ್ ಗೇಮ್ ಜೊತೆಗೆ ಮಕ್ಕಳಿಗೆ ಪದಗಳ ಉಚ್ಚಾರಣೆ ಬಗ್ಗೆ ತಿಳುವಳಿಕೆ ನೀಡಿದರು.

ಅರೇಹಳ್ಳಿ ಶಾಲೆಯ ಮುಖ್ಯೋಪಾಧ್ಯಾಯರಾದ ನಾಗರಾಜ್ ಇವರು ಅಮ್ಮ ಅಂದ್ರೆ ಮಮತೆ ಅಪ್ಪಾ ಅಂದ್ರೆ ಭದ್ರತೆ ಎಂಬ ಶೀರ್ಷಿಕೆಯಡಿಯಲ್ಲಿ ಅಮ್ಮನ ಮಮತೆಯ ಬಗ್ಗೆ ತಾಯಿ ಮಗುವಿನ ನಡುವಿನ ಸಂಬಂಧದ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಿದರು.ಮಕ್ಕಳಿಗೆ ರೈತರ ಬಗ್ಗೆ ಅರಿವು ಮೂಡಿಸಲು ಹಾಗೂ ಸಾವಯವ ಕೃಷಿ ಬಗ್ಗೆ ಮಾಹಿತಿಯನ್ನು ಸಾವಯವ ಕೃಷಿ ಮಿಷನ್ ಸದಸ್ಯರಾದ ಅರುಣ್ ಕುಮಾರ್ ಚಕ್ಕೊಡ್ ಬೈಲು ಇವರು ಮಕ್ಕಳಿಗೆ ತಿಳಿಹೇಳಿದರು ಜೊತೆಗೆ ಮಕ್ಕಳ ಕ್ರಿಯಾಶೀಲತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

Oplus_131072

ಈ ಕಾರ್ಯಕ್ರಮದಲ್ಲಿ ಹೊನ್ನೇತಾಳು ಗ್ರಾಂ ಪಂ ಅಧ್ಯಕ್ಷರಾದ ಕೋಟೆಗುಡ್ಡೆ ಸುರೇಂದ್ರ, ಆಗುಂಬೆ ಹೊಬಳಿ ಸಂಯೋಜಕರಾದ ಗಣೇಶ್,ಗ್ಯಾರೆಂಟಿ ಯೋಜನೆ ಪ್ರಾಧಿಕಾರ ದ ತೀರ್ಥಹಳ್ಳಿ ಅಧ್ಯಕ್ಷರಾದ ಸಚಿಂದ್ರ ಹೆಗ್ಡೆ,ಸಾವಯವ ಕೃಷಿ ಬಗ್ಗೆ ಮಾಹಿತಿ ನೀಡಿದ ಅರುಣ್ ಕುಮಾರ್,ಮಾಜಿ ಎಪಿಎಂಸಿ ಮಾಜಿ ಅಧ್ಯಕ್ಷರಾದ ಮಹಾಬಲೇಶ್ ಹಸಿರುಮನೆ, ಹಸಿರು ಮನೆ ನಂದನ್,ಕೆಂದಳ ಬೈಲು ವ್ಯವಸಾಯ ಸಹಕಾರ ಸೇವಾ ಸಂಘ ದ ಉಪಾಧ್ಯಕ್ಷರಾದ ಮೊಹಮದ್ ಶಮಿ, ವಿನಯ್ ಜಿ,ಗ್ರಾಂ ಪಂಚಾಯಿತಿ ಸದಸ್ಯರಾದ, ರಾಘವೇಂದ್ರ ಕುಂದಾದ್ರಿ,ರವೀಶ್ ಹೊಸಪೇಟೆ,ಗೀತಾ ದಿನೇಶ್,ಭಾಗ್ಯಹರ್ಷೇಂದ್ರಕುಮಾರ್,ರವಿಕುಮಾರ್,ವಿನಯ್ ಜಿ,ಜಯಂತಿ ಎನ್ ಕೆ,ಕೃಷ್ಣಮೂರ್ತಿ,ಮಂಜುನಾಥ್ ಎಂ ಸಿ. ಜೊತೆಗೆ 25 ಶಾಲೆಯ ಶಿಕ್ಷಕರು, ಮಕ್ಕಳು ಸಾರ್ವಜನಿಕರು ಇದ್ದರು

Leave a Reply

Your email address will not be published. Required fields are marked *