
ಶಿವಮೊಗ್ಗ : ಮಂಗನಕಾಯಿಲೆಯಿಂದ ಬಳಲುತ್ತಿದ್ದ ಬಾಲಕ ರಚಿತ್ (8) ಸಾವನ್ನಪ್ಪಿದ್ದ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕು ಕೋಣಂದೂರ್ ನ ದತ್ತರಜಪುರ ಎಂಬಲ್ಲಿ ಘಟನೆ ನಡೆದಿದೆ.ಕಳೆದ 15 ದಿನಗಳ ಹಿಂದೆ ರಚಿತ್ ಮತ್ತು ಆತನ ಸಹೋದರಿಗೆ ಜ್ವರ ಕಾಣಿಸಿಕೊಂಡಿತ್ತು.

ಇಬ್ಬರನ್ನೂ. ತೀರ್ಥಹಳ್ಳಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಬ್ಬರಿಗೂ ಪರೀಕ್ಷೆಗೆ ಒಳಪಡಿಸಲಾಗಿತ್ತು. ಸಹೋದರಿಗೆ ಮೊದಲು ಕೆಎಫ್ ಡಿ ಪಾಸಿಟಿವ್ ಬಂದಿದೆ. ಆದರೆ ರಜತ್ ಗೆ ನಾರ್ಮಲ್ ಎಂದು ಬಂದಿತ್ತು. ನಂತರ ಪಾಸಿಟಿವ್ ಬಂದಿದೆ. ಎಂದು ಕುಟುಂಬ ಮೂಲಗಳು ತಿಳಿಸಿವೆ. ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಚೇತರಿಸಿಕೊಂಡ ಸಹೋದರಿಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು.

ಆದರೆ ಗಂಭೀರ ಸ್ಥಿತಿಯಲ್ಲಿದ್ದ ರಚಿತ್ ಚಿಕಿತ್ಸೆ ಫಲಿಸದೆ ತಡರಾತ್ರಿ 8:30ರ ವೇಳೆಗೆ ಆಸ್ಪತ್ರೆಯಲ್ಲಿ ಸಾವನ್ನಪಿದ್ದಾನೆ. ಬಾಲಕನ ಹುಟ್ಟೂರಲ್ಲಿ ನೀರವ ಮೌನ ಆವರಿಸಿದೆ.ತೀರ್ಥಹಳ್ಳಿಯಲ್ಲಿ ಇದು 2 ಘಟನೆಯಾಗಿದ್ದು ಕಳೆದ ಫೆಬ್ರವರಿ ತಿಂಗಳಲ್ಲಿ ತಾಲೂಕಿನ ಕೊನೇರಿಪುರ ಗ್ರಾಮದ 54 ವರ್ಷದ ಮಹಿಳೆ ಕೆಎಫ್‌ಡಿ ಸೋಂಕಿನಿಂದ ಸಾವನ್ನಪ್ಪಿದ್ದರು.


