
ತೀರ್ಥಹಳ್ಳಿ : ರಾಜ್ಯದ ಡಿಜಿಟಲ್ ಮಾಧ್ಯಮ ಸಂಸ್ಥೆಯಲ್ಲೊಂದಾದ ನಮ್ಮೂರ್ ಎಕ್ಸ್ಪ್ರೆಸ್ ಮಾಧ್ಯಮ ಸಂಸ್ಥೆಯು ಹತ್ತನೇ ವರ್ಷದ ಸಂಭ್ರಮದಲ್ಲಿ ಮಲ್ನಾಡೋತ್ಸವ ಎಂಬ ವಿಭಿನ್ನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮವು ಮೇ 10 ರಿಂದ 12 ರ ತನಕ ನಡೆಯಲಿದೆ.ಏನೇನು ಕಾರ್ಯಕ್ರಮ ಇಲ್ಲಿದೆ ಸಂಪೂರ್ಣ ಡೀಟೇಲ್ಸ್

ಮೇ 10: ಬೆಳಿಗ್ಗೆ: 10ಕ್ಕೆ ಕೃಷಿ, ಆಹಾರ, ಆರ್ಟ್, ಶಿಕ್ಷಣ ಸಮ್ಮೇಳನ, ಅರೋಗ್ಯ ಮೇಳ ಮತ್ತು ಮಲ್ನಾಡೋತ್ಸವ-2025 ಉದ್ಘಾಟನೆ
ವಿಶೇಷತೆ ಏನೇನು?
- ಹತ್ತಾರು ಕೃಷಿ ಯಂತ್ರೋಪಕರಣ, ಕೃಷಿ ಪದಾರ್ಥ ಮಾರಾಟ, ಪ್ರದರ್ಶನ
- ಉಚಿತ ಅರೋಗ್ಯ ತಪಾಸಣಾ ಶಿಬಿರ
- ಕೃಷಿ ಕಾರ್ಯಗಾರ, ಸಂವಾದ, ಕೃಷಿ ಸಾಧಕರಿಗೆ ಗೌರವ
- ವಿವಿಧ ಬಗೆಯ ಆಹಾರ ಸ್ಟಾಲ್, ವಿಶೇಷ ಖಾದ್ಯ
- ಕಾರು, ಬೈಕ್, ಟ್ರ್ಯಾಕ್ಟರ್ ಆಟೋಗಳ ಪ್ರದರ್ಶನ, ಮಾಹಿತಿ
- ವಿವಿಧ ಶಾಲಾ, ಕಾಲೇಜುಗಳ ಶಿಕ್ಷಣ, ಕಾಲೇಜು ಮಾಹಿತಿ
- ವಿಶೇಷ ಮೀನು ಪ್ರದರ್ಶನ, ಆಟಿಕೆ, ಬಟ್ಟೆ, ಫ್ಯಾಷನ್ ವಸ್ತುಗಳ ಪ್ರದರ್ಶನ
- ಗುಡಿ ಕೈಗಾರಿಕೆ, ಮಲೆನಾಡ ಉತ್ಪನ್ನಗಳ ಪ್ರದರ್ಶನ
- ಪೇಂಟಿಂಗ್, ಚಿತ್ರ ಕಲೆ, ಕಾರ್ಟೂನ್, ಫೋಟೋಗ್ರಫಿ ಪ್ರದರ್ಶನ
- ಮಧ್ಯಾಹ್ನ: ಸಂಗೀತ ಸ್ಪರ್ಧೆ

ಮೇ 11, ಬೆಳಿಗ್ಗೆ: 10ಕ್ಕೆ: ಉದ್ಯೋಗ ಮೇಳ, ಶಿಕ್ಷಣ ಮೇಳ ಉದ್ಘಾಟನೆ
- 50+ ಬೆಂಗಳೂರು ವಿವಿಧ ಕ್ಷೇತ್ರಗಳ ಕಂಪನಿ
- ಮಲೆನಾಡು, ಕರಾವಳಿ ಭಾಗದ ಕಂಪನಿಗಳು
- ಜಾಬ್ ಪಡೆಯೋದು ಹೇಗೆ?: ವೃತ್ತಿ ಮಾರ್ಗದರ್ಶನ
- ಸ್ಪರ್ಧಾತ್ಮಕ ಪರೀಕ್ಷೆ ಎದುರಿಸೋದು ಹೇಗೆ? ತರಬೇತಿ
- ಉದ್ಯೋಗದಾತರಿಗೆ ಗೌರವ ಸಮರ್ಪಣೆ
- ಮಧ್ಯಾಹ್ನ: ಸೋಲೋ ನೃತ್ಯ ಸ್ಪರ್ಧೆ

ಮೇ 12, ಬೆಳಿಗ್ಗೆ 10ಕ್ಕೆ : ಸ್ಟಾರ್ಟ್ ಅಪ್ & ಮಹಿಳಾ ಉದ್ಯಮ ಸಮ್ಮೇಳನ
- ಮಲೆನಾಡ ಸ್ಟಾರ್ಟ್ ಅಪ್ & ಮಹಿಳಾ ಉದ್ಯಮಿಗಳ ಸಂವಾದ
- ಮಲ್ನಾಡ್ ಟ್ಯಾಲೆಂಟ್ಸ್, ಸೋಷಿಯಲ್ ಮೀಡಿಯಾ ಸ್ಟಾರ್ ಅವಾರ್ಡ್
- ಮಲ್ನಾಡ್ ಇನಿಶಿಯೇಷನ್ಸ್-2024 ಅವಾರ್ಡ್ಸ

ಪ್ರತಿ ದಿನ ಸಂಜೆ 5ಕ್ಕೆ ವೇದಿಕೆ ಕಾರ್ಯಕ್ರಮ: ಮಲೆನಾಡ ಎಲ್ಲಾ ಕ್ಷೇತ್ರದ ಗಣ್ಯರು, ಸಾಧಕರ ಸಮ್ಮಿಲನ, ವಿಶೇಷ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಪ್ರತಿ ದಿನ ಸಂಜೆ 7ಕ್ಕೆ ರಾಜ್ಯದ ಪ್ರಸಿದ್ಧ ಕಲಾವಿದರು, ನಟ ನಟಿಯರ ಮ್ಯೂಸಿಕ್ ನೈಟ್ಸ್, ಡ್ಯಾನ್ಸ್ ಎಕ್ಸ್ಪ್ರೆಸ್, ಕಾಮಿಡಿ ಶೋ, ಸೆಲೆಬ್ರಿಟಿ ಶೋ ಕಾರ್ಯಕ್ರಮ.
3 ದಿನ ಜನ ಮನ ಸೆಳೆಯುವ ಸಾಂಸ್ಕೃತಿಕ ಹಬ್ಬ

ಮೇ 10 ಸಂಜೆ 7ಕ್ಕೆ: ಕರುನಾಡಿನ ಹೆಸರಾಂತ ಗಾಯಕರಾದ ಸಾದ್ವಿನಿ ಕೊಪ್ಪ ಮತ್ತು ಪುಟಾಣಿ ಗಾಯಕಿ ದಿಯಾ ಹೆಗ್ಡೆ ಹಾಡಿನ ಮೋಡಿಸರಿಗಮಪ, ಎದೆ ತುಂಬಿ ಹಾಡುವೆನು ಖ್ಯಾತಿಯ ಗಾಯಕರ ತಂಡದಸುಧಿ ಮ್ಯೂಸಿಕ್ಸ್ ಶಿವಮೊಗ್ಗ ಇವರಿಂದ ಮ್ಯೂಸಿಕ್ ನೈಟ್ಸ್
ಮೇ 11, ಸಂಜೆ 7 ಗಂಟೆಗೆ: ಡಾನ್ಸ್ ಎಕ್ಸ್ಪ್ರೆಸ್,ಅರೆಹೊಳೆ ಪ್ರತಿಷ್ಠಾನ, ಹಾಗೂ ನಂದ ಗೋಕುಲ ತಂಡ ಮಂಗಳೂರುಇವರಿಂದ ಮಾರನಕಟ್ಟೆ ಮಹಾತ್ಮೆ ಬಿಂಬಿಸುವ “ಬಿಡುವೆನೆ ಬ್ರಹ್ಮಲಿಂಗ” ನೃತ್ಯ ರೂಪಕ ಮತ್ತು ನೃತ್ಯ ವೈಭವ. ಕನ್ನಡದ ಖ್ಯಾತ ಕಲಾವಿದರರಿಂದ ಮಿಮಿಕ್ರಿ ಹಾಗೂ ಸೆಲೆಬ್ರಿಟಿ ಶೋ
ಮೇ 12 ಸಂಜೆ 7ಕ್ಕೆ: ದೇಶ ವಿದೇಶಗಳಲ್ಲಿ ಪ್ರದರ್ಶನ ನೀಡಿರುವ ಕುಳ್ಳಪ್ಪು ತಂಡ ಕುಂದಾಪುರ ಇವರಿಂದ ಗಿರಾಕಿಯೇ ಇಲ್ಲ ಮಾರಾಯ ಹಾಸ್ಯ ನಾಟಕ
( ಪ್ರತಿ ದಿನ ಕನ್ನಡದ ಖ್ಯಾತ ನಟ ನಟಿಯರು, ಕಿರುತೆರೆ, ರಿಯಾಲಿಟಿ ಶೋ ಕಲಾವಿದರು ಆಗಮಿಸಲಿದ್ದಾರೆ.

ಮಲೆನಾಡಿನ ಹೆಮ್ಮೆಯ ಕಾರ್ಯಕ್ರಮಕ್ಕೆ ನೀವೂ ಬನ್ನಿ ನಿಮ್ಮ ಸ್ನೇಹಿತರನ್ನು ಕರೆ ತನ್ನಿ…ಎಲ್ಲಾ ಸ್ನೇಹಿತರಿಗೆ ಶೇರ್ ಮಾಡಿ…
