

ತೀರ್ಥಹಳ್ಳಿ : ತಾಲೂಕಿನ ಆಗುಂಬೆ ಹೋಬಳಿ ಶಿರೂರು ಗ್ರಾಮದ ಜಾವಗಲ್ – ಕಡ್ಲಿಯಲ್ಲಿ ಸು 44 ಕುಟುಂಬಗಳು ವಾಸಿಸುತ್ತಿದ್ದು, ಸದರಿ ಕುಟುಂಬಗಳು ರೈತರಾಗಿದ್ದು ವ್ಯವಸಾಯ ವೃತ್ತಿಯನ್ನು ಅವಲಂಬಿಸಿ ಜೀವನ ಸಾಗಿಸುತ್ತಿದ್ದಾರೆ. ಜೊತೆಗೆ ಇಲ್ಲಿ ವಾಸವಾಗಿರುವವರ ಪೈಕಿ ನಾಲ್ಕು ಕುಟುಂಬವು ಪರಿಶಿಷ್ಟ ಜಾತಿಗೆ ಸೇರಿದ ಕುಟುಂಬವಿದ್ದು ಯಾವುದೇ ವ್ಯಾಜ್ಯ ಇರದೇ, ಮೇಲು ಕೀಳು ಎಂಬ ಭಾವನೆ ಇಲ್ಲದೆ ಜೀವನ ಸಾಗಿಸುತ್ತಿದ್ದು,ಈ ವಿಷಯ ಒಂದೆಡೆಯಾದರೆ 1982-83 ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರವು ಸು 23 ಕುಟುಂಬಗಳಿಗೆ ತಲಾ 2 ಎಕರೆ ಯಂತೆ ಶಿರೂರು ಗ್ರಾಮದ ಸರ್ವೇ ನಂ 76 ರ ಮಾಲತಿ ನದಿ ತೀರದಲ್ಲಿ ದರಖಾಸ್ತು ರೂಪದಲ್ಲಿ ಮಂಜೂರು ಮಾಡಿದ್ದು ಇದರಲ್ಲಿ ಶಿರೂರು ಗ್ರಾಮದ ಪಡುವಳ್ಳಿ ವಾಸಿ ಸಣ್ಣಪ್ಪ ಇವರಿಗೂ 2ಎಕರೆ ಮಂಜೂರಾತಿಯಾಗಿರುತ್ತದೆ.

ಆದರೆ ಸಣ್ಣಪ್ಪ ನವರ ಮಗ ಗಿರೀಶ್ ಎಂಬುವವರು ತನ್ನ ಖಾತೆ ಜಮೀನು ಹೊರತು ಪಡಿಸಿ 10 ಎಕರೆಗೂ ಹೆಚ್ಚು ವಿಸ್ತೀರ್ಣದ ಅರಣ್ಯ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿದ್ದಾರೆ ಎಂದು ಗ್ರಾಮಸ್ಥರು ಅಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಷಯವಾಗಿ ತಹಶೀಲ್ದಾರ್ ರವರ ಗಮನಕ್ಕೆ ತಂದಿದ್ದು, ತಹಶೀಲ್ದಾರ್ ರಂಜಿತ್ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರೀಶೀಲನೆ ಮಾಡಿ ಒತ್ತುವರಿ ಮಾಡಿದ ಜಾಗವನ್ನು ಬಿಟ್ಟು ಕೊಡುವಂತೆ ಸೂಚನೆ ನೀಡಿದ್ದು,ಇದಾದ ಬಳಿಕ ಗಿರೀಶ್ ಅಮಾಯಕನಂತೆ ನಟಿಸಿ ಪತ್ರಿಕೆಗಳಲ್ಲಿ ಅಧಿಕಾರಿಗಳು ಹಾಗೂ ಗ್ರಾಮಸ್ಥರ ವಿರುದ್ಧ ಆರೋಪ ಒತ್ತಡ ತಂದಿದ್ದಾನೆ ಎಂದು ಸ್ಥಳೀಯರ ವಾದವಾಗಿದೆ.

ಇನ್ನು ಗಿರೀಶ್ ಎಂಬ ವ್ಯಕ್ತಿ ಸರ್ವೇ ನಂಬರ್ 76 ರಲ್ಲಿ ಗುಡಿಸಲು ಕಟ್ಟಿ ತಾನು ಸು 20 ವರ್ಷಗಳಿಂದ ವಾಸಿಸುತ್ತಿದ್ದೆನೆಂದು ಬೊಗಳೆ ಬಿಡುತ್ತ ಗ್ರಾಮಸ್ಥರಿಗೆ ಮಂಕುಬೂದಿ ಎರೆಚುತಿರುವುದು ಮೇಲ್ನೋಟಕ್ಕೆ ಕಂಡು ಬರುತಿದೆ.ಇದೆ ವಿಚಾರಕ್ಕೆ ಸಂಬಂಧ ಪಟ್ಟಂತೆ 14- 02 -2018 ರಲ್ಲಿ ಸಾ ನ್ಯಾಯ ಸಮಿತಿ ತೀರ್ಮಾನದಂತೆ ಈ ಸರ್ಕಾರಿ ಜಾಗವನ್ನು ಊರಿನ ಜನರಿಗೆ ಹಾಗೂ ಜಾನುವಾರುಗಳಿಗೆ ಮೇಯಲು ಅವಕಾಶ ನೀಡಲು ತೀರ್ಮಾನಿಸಲಾಗಿತ್ತು. ಈ ವಿಚಾರವಾಗಿ ಗ್ರಾಮದಲ್ಲಿನ ಹಿರಿಯರು – ಕಿರಿಯರು ಇದಕ್ಕೆ ಒಪ್ಪಿಗೆ ನೀಡಿದ್ದು ಬೇರೆ ಊರಿನಿಂದ ಬಂದ ಗಿರೀಶ್ ಎಂಬಾತನು ಮಾಡಿದ ಅಕ್ರಮ ಒತ್ತುವರಿಯನ್ನು ಕೂಡಲೇ ತೆರವುಗೊಳಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.ಈ ವಿಷಯವು ಇನ್ನು ಮುಂದುವರೆದು ಸಾರ್ವಜನಿಕರಿಗೆ ತೊಂದರೆ ಅಥವಾ ಕಿರಿಕಿರಿಯಾದಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.



