

ಗಡಿಯಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆ, ಭಾರತ ಮತ್ತು ಪಾಕಿಸ್ತಾನ ಪೂರ್ಣ ಮತ್ತು ತಕ್ಷಣದ ಕದನವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಎಂದು ಎಎನ್ಐ ಸುದ್ದಿ ಸಂಸ್ಥೆ ರಾಯಿಟರ್ಸ್ ಉಲ್ಲೇಖಿಸಿ ವರದಿ ಮಾಡಿದೆ.ಡೊನಾಲ್ಡ್ ಟ್ರಂಪ್ ಸಹ ಟ್ವೀಟ್ ಮಾಡುವ ಮೂಲಕ ಮಾಹಿತಿಯನ್ನು ನೀಡಿದ್ದಾರೆ.

ಎರಡು ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡಿರೋದಕ್ಕೆ ಸಂತೋಷವಾಗಿದೆ ಎಂದು ಟ್ರಂಪ್ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.ಇಂದು ಬೆಳಗ್ಗೆ ಮತ್ತೆ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಹಾಗೂ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಮಾತುಕತೆ ನಡೆಸಿದ್ದರು. ಭಾರತ ದಾಳಿ ನಿಲ್ಲಿಸಿದರೆ ಪಾಕಿಸ್ತಾನವೂ ದಾಳಿ ಮಾಡುವುದಿಲ್ಲ ಎಂದು ಮುನೀರ್ ಹೇಳಿದ್ದರು. ಈಗ ಉಭಯ ದೇಶಗಳ ಮಧ್ಯದ ಯುದ್ಧ ನಿಂತಿದೆ.

ಪಾಕ್ ದಾಳಿಗೆ ಭಾರತ ತೀವ್ರ ಉತ್ತರ ನೀಡುತ್ತಿದ್ದು, ಯುದ್ಧ ಕಾರ್ಮೋಡ ಆವರಿಸಿದ್ದರಿಂದ ಇದೀಗ ಕದನವಿರಮಾನವನ್ನು ಉಭಯ ರಾಷ್ಟ್ರಗಳು ಶಾಂತಿ ನೆಲೆಸಲು ಒಪ್ಪಿಗೆ ಸೂಚಿಸಿವೆ ಎಂದು ಟ್ರಂಪ್ ಖಚಿತಪಡಿಸಿದ್ದಾರೆ.ಜೊತೆಗೆ ಮೇ 12 ರಂದು ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ, ಕದನ ವಿರಾಮ ಘೋಷಣೆಯಾಗಿದೆ ಹೊರತು ಭಯೋತ್ಪಾದಕರ ಮೇಲೆ ಕಿಂಚಿತ್ತೂ ಕರುಣೆ ತೋರಿಸಲು ಸಾಧ್ಯವಿಲ್ಲ ಎಂದು ಭಾರತ ಹೇಳಿದೆ.
