
ಸಂಚಾರ ಪೊಲೀಸರು ಸಂಚಾರ ನಿಯಮಗಳ ಉಲ್ಲಂಘನೆ ಮಾಡುವ ಸವರರನ್ನು ತಡೆಗಟ್ಟುವ ಬಗ್ಗೆ ಒಂದಷ್ಟು ನಿಯಮಗಳನ್ನು ಜಾರಿ ಮಾಡಿದೆ.ನಿಯಮಗಳು ಈ ಕೆಳಕಂಡಂತಿವೆ ಓದಿ.

- ಸಂಚಾರ ಪೊಲೀಸರು ಸಂಚಾರ ನಿಯಮಗಳ ಉಲ್ಲಂಘನೆ ಕಂಡುಬಂದಾಗ ಮಾತ್ರ ವಾಹನಗಳನ್ನು ನಿಲ್ಲಿಸಬೇಕು ಮತ್ತು ಯಾವುದೇ ಕಾರಣವಿಲ್ಲದೆ ದಾಖಲೆಗಳನ್ನು ಪರಿಶೀಲಿಸಲು ನಿಲ್ಲಿಸಬಾರದು.
- ಹೆದ್ದಾರಿಗಳಲ್ಲಿ ಜಿಗ್ ಜಾಗ್ ಬ್ಯಾರಿಕೇಡ್‌ಗಳನ್ನು ಹಾಕಿ ವಾಹನಗಳನ್ನು ತಡೆಯಬಾರದು.
- ರಸ್ತೆ ಮಧ್ಯೆ ದಿಢೀರ್ ಅಡ್ಡ ಬಂದು ವಾಹನ ನಿಲ್ಲಿಸುವಂತೆ ಹೇಳಬಾರದು.
- ಬೈಕ್ ಹಿಂಬದಿ ಸವಾರನನ್ನು ಹಿಡಿದು ಎಳೆಯುವುದು ಹಾಗೂ ವಾಹನದ ಕೀಲಿ ಕೈ ತೆಗೆದುಕೊಳ್ಳುವುದನ್ನು ಮಾಡಬಾರದು.
- ವೇಗವಾಗಿ ವಾಹನ ಚಲಾಯಿಸಿ ಕೊಂಡು ಬರುವ ಸವಾರರನ್ನು ಬೆನ್ನಟ್ಟದೆ ಆ ವಾಹನಗಳ ನೋಂದಣಿ ಸಂಖ್ಯೆ ಗುರುತು ಮಾಡಿ, ನಿಯಂತ್ರಣ ಕೊಠಡಿಗಳಿಗೆ ಮಾಹಿತಿ ನೀಡಿ ಪ್ರಕರಣವನ್ನು ದಾಖಲಿಸಬೇಕು.

- ವಾಹನಗಳ ತಪಾಸಣೆ ವೇಳೆ ಪೊಲೀಸರು ಸುರಕ್ಷತೆಗಾಗಿ ರಿಪ್ಲೆಕ್ಟಿವ್ ಜಾಕೆಟ್ ಧರಿಸಬೇಕು ಮತ್ತು ಬಾಡಿ ವೋರ್ನ್ ಕ್ಯಾಮೆರಾ ಧರಿಸಬೇಕು. ಸಂಜೆ ಮತ್ತು ರಾತ್ರಿ ವೇಳೆ ಎಲ್ಇಡಿ ಲಾಠಿಗಳನ್ನು ಕಡ್ಡಾಯವಾಗಿ ಬಳಸಬೇಕು.
- ರಾಜ್ಯ, ರಾಷ್ಟ್ರೀಯ ಹೆದ್ದಾರಿ ಹಾಗೂ ಇತರೆ ರಸ್ತೆಗಳಲ್ಲಿ ಯಾವುದೇ ಕಾರಣಕ್ಕೂ ಅತಿ ವೇಗವಾಗಿ ಚಲಿಸುವ ವಾಹನಗಳನ್ನು ತಡೆಯುವ ಪ್ರಯತ್ನ ಮಾಡಬಾರದು ಹಾಗೂ ಇಂತಹ ವಾಹನಗಳ ವಿರುದ್ಧ ಎಫ್‌ಟಿಆರ್ ದಾಖಲಿಸಲು ತಂತ್ರಜ್ಞಾನವನ್ನು ಅನುಸರಿಸಬೇಕು.
- ರಾತ್ರಿ ಮತ್ತು ತಡರಾತ್ರಿಯಲ್ಲಿ ಸಂಚಾರ ಸಿಗ್ನಲ್ ದೀಪಗಳಿರುವ ಅಥವಾ ಜಂಕ್ಷನ್‌ಗಳ ಬದಿಯಲ್ಲೇ ವಾಹನ ತಪಾಸಣೆ ಮಾಡಬೇಕು.

- ವಾಹನಗಳ ವೇಗ ತಗ್ಗಿಸಲು ತಪಾಸಣೆ ಸ್ಥಳದ ಸುಮಾರು 100-150 ಮೀಟರ್ ಮೊದಲೇ ರಿಪ್ಲೆಕ್ಟಿವ್ ರಬ್ಬರ್ ಕೋನ್ ಮತ್ತು ಸುರಕ್ಷತಾ ಸಲಕರಣೆ ಅಳವಡಿಸಬೇಕು ಎಂದು ಡಿಜಿಪಿ ಆದೇಶದಲ್ಲಿ ತಿಳಿಸಿದ್ದಾರೆ.
