
ಮೊದಲ ಬಾರಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ಟ್ರೋಫಿ ಗೆದ್ದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಜೂನ್ 4ರಂದು ವಿಧಾನಸೌಧದ ಮುಂದೆ ಸನ್ಮಾನಿಸಿ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟ್ರೋಫಿ ವಿಜಯೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮಕ್ಕೆ ಆಗಮಿಸಿದ್ದ ಲಕ್ಷಾಂತರ ಅಭಿಮಾನಿಗಳ ನಡುವೆ ನೂಕುನುಗ್ಗಲು ಉಂಟಾಗಿ 11 ಮಂದಿ ಸಾವನ್ನಪ್ಪಿದರು. ಈ ಪ್ರಕರಣ ಸದ್ಯ ರಾಜ್ಯ ಸರ್ಕಾರಕ್ಕೆ ಹೈ ಟೆಂಷನ್ ಆಗಿ ಪರಿಣಮಿಸಿದ್ದು,ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ವಿರುದ್ಧ ಜನ ಸಾಮಾನ್ಯರು ಹಾಗೂ ವಿರೋಧ ಪಕ್ಷಗಳು ರಾಜೀನಾಮೆ ನೀಡಲು ಒತ್ತಾಯಿಸಿದವು.

ಈ ಪ್ರಕರಣದ ಜೊತೆಗೆ ಕ್ರೀಡಾಂಗಣವನ್ನು ನಗರ ಪ್ರದೇಶದಿಂದ ಹೊರಗೆ ಸ್ಥಳಾಂತರಿಸಬೇಕೆಂದು ಕೂಗು ಕೇಳಿಬಂದಿದ್ದು, ಈ ಬಗ್ಗೆಯೂ ಮಾತನಾಡಿದ ಸಿದ್ದರಾಮಯ್ಯ ʼಅದನ್ನು ಪರಿಶೀಲನೆ ಮಾಡುತ್ತೇವೆ. ಬೇರೆ ಜಾಗ ಎಲ್ಲ ನೋಡಬೇಕಲ್ಲʼ ಎಂದು ಹೇಳುವ ಮೂಲಕ ಚಿನ್ನಸ್ವಾಮಿ ಸ್ಥಳಾಂತರದ ಮುನ್ಸೂಚನೆ ನೀಡಿದ್ದಾರೆ.

