
ತೀರ್ಥಹಳ್ಳಿ : ಸರ್ಕಾರಿ ಆಸ್ಪತ್ರೆಯಾಗಿರುವ ಜಯಚಾಮರಾಜೇಂದ್ರ ಆಸ್ಪತ್ರೆಯಿಂದ ಪ್ರಮುಖ ಆರು ವೈದ್ಯರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ..

ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಗಣೇಶ್, ಮಕ್ಕಳ ತಜ್ಞರಾಗಿದ್ದ ಡಾ. ಪ್ರಭಾಕರ್ ಹಾಗೂ ಕಣ್ಣಿನ ತಜ್ಞರಾಗಿದ್ದ ಡಾ. ಮಹಿಮಾ, ಮೂಳೆ ತಜ್ಞರಾದ ಡಾ.ನಿಶ್ಚಲ್, ಕಿವಿ ಮೂಗು ತಜ್ಞರಾಗಿದ್ದ ಡಾ. ರವಿಕುಮಾರ್ ಹಾಗೂ ಮತ್ತೊರ್ವ ವೈದ್ಯರನ್ನು ಸೇರಿದಂತೆ ಒಟ್ಟು ಆರು ಮಂದಿ ವೈದ್ಯರನ್ನು ಸರ್ಕಾರ ವರ್ಗಾವಣೆ ಮಾಡಿದ್ದು ಈ ಪೈಕಿ ಮೂವರು ಕೊಪ್ಪ ಸರ್ಕಾರಿ ಆಸ್ಪತ್ರೆಗೆ ವರ್ಗಾವಣೆಗೊಂಡಿದ್ದಾರೆ. ಇನ್ನುಳಿದವರ ಬಗ್ಗೆ ಮಾಹಿತಿ ಬರಬೇಕಿದೆ.

ಶಾಸಕ ಆರಗ ಜ್ಞಾನೇಂದ್ರ ಆಸ್ಪತ್ರೆಗೆ ಭೇಟಿ ನೀಡಿ ಅಧಿಕಾರಿಗಳ ಜೊತೆಗೆ ಚರ್ಚೆ ಮಾಡಿದ್ದರು. ನಂತರ ಯಾರನ್ನು ವರ್ಗಾವಣೆ ಮಾಡಬಾರದು ಎಂದು ಶಾಸಕ ಆರಗ ಜ್ಞಾನೇಂದ್ರ ಆರೋಗ್ಯ ಮಂತ್ರಿಗಳಿಗೆ ಪತ್ರ ಬರೆದಿದ್ದರು. ಆದರೆ ಶಾಸಕರ ಪತ್ರಕ್ಕೆ ಯಾವುದೇ ಕಿಮ್ಮತ್ತು ನೀಡದೆ ಎಲ್ಲರನ್ನು ವರ್ಗಾವಣೆ ಮಾಡಲಾಗಿದೆ. ಒಟ್ಟಿನಲ್ಲಿ ಸರ್ಕಾರದ ಆದೇಶದಲ್ಲಿ ಜೆ ಸಿ ಆಸ್ಪತ್ರೆ ವೈದ್ಯರಿಲ್ಲದೆ ಸಂಪೂರ್ಣ ಖಾಲಿ ಖಾಲಿ ಆಗಿದೆ.