
ತೀರ್ಥಹಳ್ಳಿ : ತಾಲೂಕಿನ ಕಾಂಗ್ರೆಸ್ ಮುಖಂಡರು ಹಾಗೂ ಮುಳುಬಾಗಿಲು ಗ್ರಾಂ ಪಂ ಸದಸ್ಯರಾದ ಮಂಜುನಾಥ್ ಶೆಟ್ಟರಿಗೆ ಕರ್ನಾಟಕ ರಕ್ಷಣಾ ವೇದಿಕೆ ಉತ್ತಮ ಹುದ್ದೆ ನೀಡಿ ಗೌರವಿಸಿದೆ.

ತೀರ್ಥಹಳ್ಳಿ ತಾಲೂಕಿನ ಪ್ರತಿಷ್ಠಿತ ಪಕ್ಷದಲ್ಲಿ ಕಾರ್ಯಕರ್ತನಾಗಿ,ಸಮಾಜ ಸೇವಕರಾಗಿ ಸೇವೆ ಸಲ್ಲಿಸುತ್ತಿದ್ದು, ಬಡವರ ಪಾಲಿಗೆ ಕೊಡುಗೈ ದಾನಿಯಾಗಿದ್ದಾರೆ. ಇವರ ಸಮಾಜಮುಖಿ ಕೆಲಸಗಳನ್ನು ಪರಿಗಣಿಸಿ ರಾಷ್ಟ್ರ ಪ್ರಶಸ್ತಿ, ರಾಜ್ಯ ಪ್ರಶಸ್ತಿ, ಗೌರವ ಡಾಕ್ಟರೇಟ್ ಇವರ

ಮುಡಿಗೆರಿವೆ.ಜನಸೇವೆಯಲ್ಲಿ ನಿರತರಾಗಿರುವ ಮಂಜುನಾಥ್ ಶೆಟ್ಟರು ಸಮಾಜಕ್ಕೆ ಕೆಡಕು ಬಯಸುವವ ವಿರುದ್ಧ ಹೋರಾಟ ನಡೆಸಿ ತನ್ನ ನಿಲುವು ತೋರಿಸಿ ಇತರರಿಗೆ ಮಾದರಿಯದವರು. ಇವರ ನಿಷ್ಕಲ್ಮಶ ನಾಡಿನ ಪ್ರೇಮ, ನಡೆ ನುಡಿ, ಉತ್ತಮ ಚಾರಿತ್ರ್ಯವನ್ನು ಗಮನಿಸಿ

ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಪ್ರವೀಣ್ ಕುಮಾರ್ ಹಾಗೂ ಶಿವಮೊಗ್ಗ ಜಿಲ್ಲಾ ಜಿಲ್ಲಾಧ್ಯಕ್ಷರಾದ ಕನ್ನಡ ಮುರಳಿ ಯವರು ಇವರನ್ನು ತೀರ್ಥಹಳ್ಳಿ ತೀರ್ಥಹಳ್ಳಿ ತಾಲೂಕು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಆದೇಶ ಹೊರಡಿಸಿದ್ದಾರೆ.