ತೀರ್ಥಹಳ್ಳಿ : ತಾಲೂಕಿನ ಪ್ರಸಿದ್ಧ ಪುರಾಣ ಹಾಗೂ ಪ್ರವಾಸಿ ತಾಣದಲ್ಲೊಂದಾದ ಹಣಗೆರೆ ಕಟ್ಟೆಯಲ್ಲಿ ಬೀದಿ ನಾಯಿಗಳ ಹಾವಳಿ ಜಾಸ್ತಿಯಾಗಿದೆ.

ಕೆಲವೊಮ್ಮೆ ರೇಬಿಸ್ ಪೀಡಿತ ನಾಯಿಗಳ ದಾಳಿಗಳ ಕುರಿತು ಹಲವಾರು ವರದಿ ಗಳಾಗಿದ್ದು, ನಾಯಿಗಳ ಕಡಿತಕ್ಕೆ ಒಳಗಾಗಿ ಸಾವು ನೋವುಗಳು ಆಗಿವೆ.ಆದರೆ ನಿರಂತರವಾಗಿ ನಡೆಯುವ ಈ ಬೀದಿ ನಾಯಿ ಕಡಿತ, ಬೈಕ್ ನಲ್ಲಿ ಚಲಿಸುವಾಗ ಅಟ್ಟಾಡಿಸುವಿಕೆ ಇತ್ಯಾದಿ ಬಗ್ಗೆ ಗ್ರಾಂ ಪಂಚಾಯಿತಿ ಹಾಗೂ ಸಂಬಂಧ ಪಟ್ಟ ಇಲಾಖೆಯವರು ನಿರ್ಲಕ್ಷ ವಹಿಸುತ್ತಿದ್ದು,

ಸ್ಥಳೀಯರ ಅಕ್ರೋಷಕ್ಕೆ ಕಾರಣವಾಗಿದೆ.ಸಂತಾನ ಹರಣ ಮಾಡದೇ ಹಣಗೆರೆ ದೇವಸ್ಥಾನದ ಬಳಿ ಬಿಟ್ಟು ಹೋಗುತ್ತಿದ್ದು, ನಾಯಿಗಳು ಮತ್ತೆ ಮರಿ ಹಾಕುತಿದ್ದು, ಬೀದಿ ನಾಯಿಗಳ ಸಂತತಿ ಮತ್ತಷ್ಟು ಜಾಸ್ತಿಯಾಗುತ್ತಿದೆ.

ಹಾಗೂ ಈ ಬಗ್ಗೆ ಕರ್ನಾಟಕ ರಾಜ್ಯ ನೆಲ -ಜಲ ಉಳಿಸಿ ಹೋರಾಟ ಸಮಿತಿ ತಾಲೂಕು ಅಧ್ಯಕ್ಷ ಕಿರಣ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದು, ಈ ಹಿಂದೆ ಗ್ರಾಂ ಪಂ ಇದರ ಬಗ್ಗೆ ಕಾರ್ಯಾಚರಣೆ ಮಾಡುತಿದ್ದರು ಈಗ ಯಾವುದೇ ಯಾವುದೇ ಕ್ರಮ ಜರುಗಿಸುತ್ತಿಲ್ಲ. ಬೀದಿ ನಾಯಿಗಳ ಬಗ್ಗೆ ಗಮನ ಹರಿಸಿ ಸಾವಜನಿಕರಿಗೆ, ವಯಸ್ಸಾದವರಿಗೆ, ಶಾಲಾ ಮಕ್ಕಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ಅಗತ್ಯವಾಗಿದೆ.

Leave a Reply

Your email address will not be published. Required fields are marked *