
ಮೂಲಭೂತ ಸೌಕರ್ಯ ಗಳ ಪರಿಶೀಲನೆ – ತಣ್ಣೀರಲ್ಲಿ ಸ್ನಾನ. ವಿದ್ಯಾರ್ಥಿನಿಯರ ಕಷ್ಟ ಕೇಳೋರ್ಯಾರು?

ಶಿವಮೊಗ್ಗ :ತೀರ್ಥಹಳ್ಳಿ ಪಟ್ಟಣದಲ್ಲಿರುವ ಬಿ ಸಿ ಎಂ ಫ್ರೀ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಮತ್ತು ಬಿ ಆರ್ ಅಂಬೇಡ್ಕರ್ ಪರಿಶೀಷ್ಟ ಜಾತಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿ ನಿಲಯಕ್ಕೆ ಜುಲೈ. 23ರಂದು ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ರೆಹಮಾತ್ ಉಲ್ಲಾ ಅಸಾದಿ ಹಾಗೂ ಉಪಾಧ್ಯಕ್ಷ ರಾದ ಗೀತಾ ರಮೇಶ್ ಭೇಟಿ ನೀಡಿದರು.

ಈ ವೇಳೆ ಕುಡಿಯುವ ನೀರು, ಸ್ವಚ್ಛತೆ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದಂತಹ ವಿಚಾರಗಳ ಬಗ್ಗೆ ಮೂಲಭೂತ ಸೌಕರ್ಯಗಳ ಬಗ್ಗೆ ಗಮನ ಹರಿಸಲಾಯಿತು, ಈ ವೇಳೆ ವಿದ್ಯಾರ್ಥಿನಿಯರು ಬಿಸಿ ನೀರು ಬಾರದೆ ತಣ್ಣೀರನ್ನು ಸ್ನಾನ ಕ್ಕೆ ಉಪಯೋಗಿಸುತ್ತಿವುದರ ಬಗ್ಗೆ ಗಮನಕ್ಕೆ ಬಂದಿದ್ದು ಗೀಸರ್ ಇದ್ದರು ಉಪಯೋಗಕ್ಕೆ ಬಾರದಂತಿದೆ,

ಜೊತೆಗೆ ಹಾಸಿಗೆ ಇಲ್ಲದ ಮಂಚ ದಲ್ಲಿ ಮಲಗುವ ಪರಿಸ್ಥಿತಿ ಎದುರಾಗಿದೆ ಎಂದು ಪೋಷಕರು ಅಕ್ರೋಶ ವ್ಯಕ್ತಪಡಿಸಿದ್ದಾರೆ.ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಉಪಾಧ್ಯಕ್ಷರದ ಗೀತಾ ರಮೇಶ್ ಹಾಗೂ ಆರೋಗ್ಯ ನಿರೀಕ್ಷಕರಾದ ಪ್ರಕಾಶ್ ಪಟ್ಟಣ ಪಂಚಾಯತಿ ಮಹಿಳಾ ಸಿಬ್ಬಂದಿ ಗಳು ಉಪಸ್ಥಿತರಿದ್ದರು.
