ಧರ್ಮಸ್ಥಳ ಕೇಸ್‌ನಲ್ಲಿ ಮತ್ತೊಬ್ಬ ದೂರುದಾರ ಎಸ್‌ಐಟಿ ಮುಂದೆ ಹಾಜರಾಗಿ ದೂರು ನೀಡಲು ಬಂದಿರುವುದಾಗಿ ಹೇಳಿಕೆ ನೀಡಿದ್ದಾರೆ. ಬುರುಡೆ ರಹಸ್ಯ ಬೇಧಿಸುತ್ತಿರುವ ಎಸ್‌ಐಟಿ ತಂಡದ ತನಿಖೆಯ ಪ್ರಕ್ರಿಯೆ ನಡುವೇ ಪ್ರಕರಣವು ಇದೀಗ ಮಹತ್ವದ ತಿರುವು ಪಡೆದಂತಾಗಿದೆ. ಜಯಂತ್ ಟಿ ಎಂಬುವವರು ದೂರು ನೀಡಲು ಮುಂದಾಗಿದ್ದಾರೆ.ದೂರುದಾರ, ಹಲವು ವರ್ಷಗಳ ಹಿಂದೆ ಧರ್ಮಸ್ಥಳ ಗ್ರಾಮದಲ್ಲಿ ಸಾಕಷ್ಟು ಕೊಲೆಗಳು ಆಗಿವೆ ಎಂದು ನಾನು ಈ ಮೊದಲು ಹೇಳಿದ್ದಾಗಿ ಆರೋಪಿಸಿದ್ದಾರೆ. ತಾನು ಅನೇಕ ವೇದಿಕೆಗಳಲ್ಲೂ ಈ ಕುರಿತು ಪ್ರಸ್ತಾಪಿಸಿದ್ದೆ. ನಾಳೆ ರಜೆ ಕಾರಣ ಸೋಮವಾರ ಬರಲು ಎಸ್‌ಐಟಿ ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಸೋಮವಾರ ಬಂದು ಎಲ್ಲ ಮಾಹಿತಿ ನೀಡುವೆ ಎಂದಿದ್ದಾರೆ.ದಕ್ಷಿಣ ಕನ್ನಡ ಜಿಲ್ಲೆಯ ಇಚೀಲಂಪಾಡಿ ನಿವಾಸಿ ಜಯನ್ ಎಂಬ ಸಾಕ್ಷಿದಾರ ಹದಿನೈದು ವರ್ಷಗಳ ಹಿಂದೆ ಬಾಲಕಿ ಒಬ್ಬಳ ಮೃತ ದೇಹ ನೋಡಿದೆ ಅನುಮಾನ ರೀತಿಯಲ್ಲಿ ಮೃತಪಟ್ಟಿದ್ದ ಬಾಲಕಿಯ ನೋಡಿದ್ದೆ ಎಂದು ಮಾಧ್ಯಮದ ಮುಂದೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *