• ಸಂಬಂಧ ಪಟ್ಟವರು ಗಮನಿಸುತ್ತಿಲ್ಲ ಯಾಕೆ? – ಕೊಳಕು ಪ್ರದೇಶದಲ್ಲಿ ತಾಲೂಕು ಕಚೇರಿ ಬೇಕಿತ್ತಾ – ಸಾರ್ವಜನಿಕರ ಪ್ರಶ್ನೆ

ತೀರ್ಥಹಳ್ಳಿ : ಪಟ್ಟಣದ ಹೃದಯಭಾಗದಲ್ಲಿರುವ ತಾಲೂಕು ಆಫೀಸ್ ಕಟ್ಟಡ ದ ಸುತ್ತ ಮುತ್ತ ಎಲ್ಲಿ ನೋಡಿದರಲ್ಲಿ ಕಸ ಹಾಕಿ ಗಬ್ಬು ನಾರುತ್ತಿದೆ.ಇನ್ನು ಸಾರ್ವಜನಿಕರು ಈ ಬಗ್ಗೆ ಧ್ವನಿ ಎತ್ತಿದ್ದೂ ಕಸ ವಿಲೇವಾರಿ ಮಾಡಲು ಪಟ್ಟು ಹಿಡಿದಿದ್ದಾರೆ.

ತಿಂಗಳುಗಳಿಂದ ಕಸ ವಿಲೇವಾರಿ ಆಗದೆ ಮಳೆಗೆ ಗಬ್ಬು ವಾಸನೆ ಬರುತಿದ್ದದ್ದು ಸ್ಥಳೀಯರ ಬೇಸರಕ್ಕೆ ಕಾರಣವಾಗಿದೆ.ಇನ್ನು ಸಂಬಂಧ ಪಟ್ಟವರು ಯಾವುದೇ ಕ್ರಮ ವಹಿಸದಿರುವುದು ಬೇಸರದ ಸಂಗತಿ.

ಉತ್ತಮ ಸಮಾಜದಲ್ಲಿ ಶುಚಿ ಹಾಗೂ ಶಿಸ್ತು ತುಂಬಾ ದೊಡ್ಡ ಪಾತ್ರ ವಹಿಸಲಿದ್ದು, ಕೂಡಲೇ ಕಸ ವಿಲೇವಾರಿಗೆ ಪಟ್ಟಣ ಪಂಚಾಯಿತಿ ಕ್ರಮ ಕೈಗೊಳ್ಳಲು ಸ್ಥಳೀಯರು ಸತ್ಯಶೋಧ ನ್ಯೂಸ್ ಮಾಧ್ಯಮದ ಮೂಲಕ ತಿಳಿಸಿದ್ದಾರೆ.

Leave a Reply

Your email address will not be published. Required fields are marked *