

ನಾಟಿ ವೈದ್ಯ ಈಶ್ವರ್ ನಾಯ್ಕ್ ರವರ ಧರ್ಮಪತ್ನಿ ಲೀಲಾವತಿ ವಿಧಿವಶ
ತೀರ್ಥಹಳ್ಳಿ : ತೀರ್ಥಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮುಡುಬ ರಾಘವೇಂದ್ರ ಹಾಗೂ ಮಲೆನಾಡಿನ ಹೆಮ್ಮೆಯ ನಾಟಿ ವೈದ್ಯ ಡಾ ಈಶ್ವರ್ ನಾಯ್ಕ್ ಅವರ ಧರ್ಮಪತ್ನಿ ಜಾನಪದ ಸಿರಿ ಪ್ರಶಸ್ತಿ ವಿಜೇತರಾದ ಶ್ರೀಮತಿ ಲೀಲಾವತಿ ಈಶ್ವರ್ ನಾಯ್ಕ್ ದಿ 18ರ ಸೋಮವಾರ 6ಗಂಟೆಗೆ ವಿಧಿವಶರಾಗಿದ್ದಾರೆ.

ವಯೋಸಹಜ ಕಾಯಿಲೆಯಿಂದ ಬಳಲುತಿದ್ದರು ಎನ್ನಲಾಗಿದ್ದು, ಇವರ ಅಗಲಿಕೆಗೆ ನಾರಾಯಣ ಗುರು ವಿಚಾರ ವೇದಿಕೆ ತೀರ್ಥಹಳ್ಳಿ ಹಾಗೂ ಆರ್ಯ ಈಡಿಗರ ಸಂಘ ಹಾಗೂ ಸತ್ಯಶೋಧ ನ್ಯೂಸ್ ಮಾಧ್ಯಮ ಹಾಗೂ ಸಮಸ್ತ ತೀರ್ಥಹಳ್ಳಿ ಜನತೆ ಕಂಬನಿ ಮಿಡಿದಿದೆ.ಇವರ ಪಾರ್ಥವ ಶರೀರವನ್ನು ಮುಡುಬದ ಅವರ ಮನೆಯಲ್ಲಿ ದಿ 19 ರ ಬೆಳಿಗ್ಗೆ ತನಕ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಲಾಗಿದೆ.ಎಂದು ಕುಟುಂಬದ ಮೂಲಗಳು ತಿಳಿಸಿದೆ.
