

ತೀರ್ಥಹಳ್ಳಿ : ತಾಲೂಕಿನ ಆಗುಂಬೆ ಹೋಬಳಿಯ ಅಗಸರ ಕೋಣೆ ಶ್ರೀ ಸಿದ್ದಿವಿನಾಯಕ ಸೇವಾ ಸಮಿತಿ ಇವರ 3ನೇ ವರ್ಷದ ಗಣೇಶೋತ್ಸವ ಈ ಭಾರಿ ಆ 27 ರ ಬುಧವಾರ ವಿಭಿನ್ನವಾಗಿ ಹಾಗೂ ಅದ್ದೂರಿಯಾಗಿ ನಡೆಸಲಿದೆ. ಅಗಸರಕೋಣೆಯ ಸರ್ಕಾರಿ ಕಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ಮಹಾ ಗಣಪತಿ ಪ್ರತಿಷ್ಠಾಪನೆ ಹಾಗೂ ಪೂಜಾ ಕೈಂಕಾರ್ಯಗಳು ಜರುಗಲಿದ್ದು ಈ ಕಾರ್ಯಕ್ರಮದಲ್ಲಿ ಮದ್ಯಾಹ್ನ 1 ರಿಂದ ಸಾಂಸ್ಕೃತಿಕ ಕಾರ್ಯಕ್ರಮ,

ಸಭಾ ಕಾರ್ಯಕ್ರಮ ಹಾಗೂ ಇಬ್ಬರು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಾಗೂಸಂಜೆ 7ಕ್ಕೆ ಮಹಾ ಮಂಗಳಾರತಿ ಪ್ರಸಾದ ವಿನಿಯೋಗ ಹಾಗೂ ರಾತ್ರಿ 8 ಕ್ಕೆ ವಿದ್ಯುತ್ ದೀಪಾಲಂಕೃತ ವಾಹನದಲ್ಲಿ ರಾಜಬೀದಿ ಉತ್ಸವ ಹಾಗೂ ವಿಸರ್ಜನೆ ಕಾರ್ಯಕ್ರಮ ನಡೆಯಲಿದೆ.ಈ ದೇವತಾ ಕಾರ್ಯಕ್ರಮ ಕ್ಕೆ ಸರ್ವರನ್ನ ಆತ್ಮೀಯವಾಗಿ ಸಮಿತಿ ಹಾಗೂ ಶಾಲಾ ಬಳಗ ಸ್ವಾಗತಿಸಿದೆ.


