ತೀರ್ಥಹಳ್ಳಿ : ಪಟ್ಟಣ ಪಂಚಾಯಿತಿಯ ಕಾರ್ಯಕ್ರಮಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ತರುವಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ರೆಹಮತ್ ಉಲ್ಲಾ ಅಸಾದಿ ವಿನೂತನ ಹೆಜ್ಜೆ ಇಟ್ಟಿದ್ದು, ಇದೀಗ ಈ ಯೋಜನೆಗಳಲ್ಲಿ ಒಂದಾದ ಕಲ್ಲಿನಿಂದ ಕೆತ್ತನೆಗೊಂಡ ಸೆಲ್ಫಿ ಪಾಯಿಂಟ್ ಸ್ಟೋನ್ ಬೋರ್ಡ್ ಕೂಡ ಒಂದಾಗಿದ್ದು ಈ ಕಲಾಕೃತಿಯನ್ನು ತೀರ್ಥಹಳ್ಳಿ ಶಿಲ್ಪ ಕಲಾವಿದರಾದ ಮಣಿಕಂಠ ಮತ್ತು ಜಗದೀಶ್ ರವರ ಕೊಡುಗೆಯ ರೂಪದಲ್ಲಿ ದಸರಾ ಸಂದರ್ಭದಲ್ಲಿ ಕುಶಾವತಿ ಪಾರ್ಕ್ ನಲ್ಲಿ ಸೆಲ್ಫಿ ಸ್ಟೋನ್ ಬೋರ್ಡ್ ಹಾಕಲು ವ್ಯವಸ್ಥೆ ಮಾಡಲಾಗಿದ್ದು. ಸ್ಟೋನ್ ಬೋರ್ಡ್ ನ ಕೆಲಸ ಬಹುತೇಕ ಮುಗಿದಿದ್ದು,ದಸರಾ ಹಬ್ಬಕ್ಕೆ ಬರುವ ಸಾವಿರಾರು ಜನರಿಗೆ ಸೆಲ್ಫಿ ಪಾಯಿಂಟ್ ಆಕರ್ಷಣೆ ಕೇಂದ್ರಬಿಂದುವಾಗಲಿದೆ.ಜೊತೆಗೆ ತೀರ್ಥಹಳ್ಳಿ ಪಟ್ಟಣದ ತುಂಗಾ ನದಿ ತೀರದಲ್ಲಿ ಐ ಲವ್ ತೀರ್ಥಹಳ್ಳಿ ಲೈಟಿಂಗ್ ಬೋರ್ಡ್ ಕೂಡ ಇರಲಿದೆ.

Leave a Reply

Your email address will not be published. Required fields are marked *