
ಶಿವಮೊಗ್ಗ : ಹೊಸನಗರ ತಾಲೂಕು ಬಂಟೋಡಿಯಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ತಾಲೂಕಿನ ಹೊಸೂರು ಗ್ರಾಪಂಯ ಕಟ್ಟಿನಹೊಳೆ ಗ್ರಾಮಶನಿವಾರ ಮದ್ಯಾಹ್ನ ಉಕ್ಕಡದಲ್ಲಿ ತೆರಳುತ್ತಿದ್ದ ವೇಳೆ ಉಕ್ಕಡ ಮಗುಚಿದ್ದು ಮೂವರು ಯುವಕರು ನದಿಗೆ ಬಿದ್ದಿದ್ದು ಮೂವರಲ್ಲಿ ಪೂರ್ಣೇಶ (22) ಎಂಬ ಯುವಕ ನೀರುಪಾಲಾಗಿದ್ದಾನೆ.

ಯುವಕರಾದ ಶರತ್, ರಂಜನ್ ಸಧ್ಯ ಬಚಾವ್ ಆಗಿದ್ದಾರೆ.ವಿಷಯ ತಿಳಿಯುತ್ತಿದಂತೆ ನೀರುಪಾಲಾದ ಯುವಕನ ಶೋಧನೆಗೆ ಅಗ್ನಿ ಶಾಮಕದಳ ಹಾಗೂ ಪೊಲೀಸರು ಧಾವಿಸಿದ್ದರು.ಈ ದುರ್ಘಟನೆಗೆ ಸರ್ಕಾರವೇ ಉತ್ತರಿಸಬೇಕು ಎಂಬ ಆಕ್ರೋಶ ವ್ಯಕ್ತವಾಗಿದೆ.

ಚಿಂಚನೂರು ಮತ್ತು ಬಟೋಡಿ ನಡುವೆ ಕಾಲುಸಂಕಕ್ಕಾಗಿ ಗ್ರಾಮಸ್ಥರು ವರ್ಷಗಳ ಬೇಡಿಕೆ ಇಟ್ಟಿದ್ದು,ಮುಳುಗಡೆ ಬಂದಾಗ ಉಕ್ಕಡದ ಸಂಪರ್ಕದಿಂದ ರೋಸಿ ಹೋಗಿದ್ದರು.ಹಲವು ದಶಕಗಳ ಬೇಡಿಕೆಗೆ ಸ್ಪಂದಿಸದ ಸರ್ಕಾರಕ್ಕೆ ಗ್ರಾಮಸ್ಥರು ಬೇಸರ ಹೊರಹಾಕಿದ್ದಾರೆ.


