• ಗಣ್ಯರ ಉಪಸ್ಥಿತಿಯಲ್ಲಿ ಅಚ್ಚುಕಟ್ಟು ಕಾರ್ಯಕ್ರಮ
    -ಆರ್ ಎಂ ಎಂ ಗೆ 3 ಕ್ವಿಂಟಲ್ ಸೇಬಿನ ಅಭಿಮಾನದ ಹಾರ
  • ತೀರ್ಥಹಳ್ಳಿ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಕಾರ್ಯಕ್ರಮ

𝘚𝘈𝘛𝘏𝘠𝘈𝘚𝘏𝘖𝘋𝘏𝘈 𝘕𝘌𝘞𝘚 ತೀರ್ಥಹಳ್ಳಿ : ತಾಲೂಕಿನ ಹೃದಯ ಭಾಗದಲ್ಲಿರುವ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಆರ್ ಎಂ ಮಂಜುನಾಥ್ ಗೌಡರಿಗೆ ಸನ್ಮಾನ ಕಾರ್ಯಕ್ರಮ ಜರುಗಿತು.ಕಾರ್ಯಕ್ರಮದ ಶುರುವಲ್ಲಿ ಬೈಕ್ ರ್ಯಾಲಿ ಜೊತೆಗೆ ಡಿ ಜೆ, ಹುಲಿ ಕುಣಿತ,ಚಂಡೆಯೊಂದಿಗೆ ಆರ್ ಎಂ ಮಂಜುನಾಥ್ ಗೌಡರು ತೀರ್ಥಹಳ್ಳಿ ಯ ಪ್ರಮುಖ ಬೀದಿಯಲ್ಲಿ ಮೆರವಣಿಗೆಯಲ್ಲಿ ಸಾಗಿದರು.

ಈ ವೇಳೆ ಆರ್ ಎಂ ಮಂಜುನಾಥ್ ಗೌಡರ ಅಪ್ಪಟ ಅಭಿಮಾನಿ ಎಂ ಜೆ ಡೆವಲಪರ್ಸ್ ಮಾಲೀಕರು ಆದ ಅಂಬಳಿಕೆ ಮಹೇಂದ್ರ ಗೌಡ ರು 3 ಕ್ವಿಂಟಲ್ ತೂಕದ ಸೇಬು ಹಾಗೂ ಮೂಸಂಬಿ ಹಾರವನ್ನು ಕ್ರೈನ್ ಮೂಲಕ ಅಭಿಮಾನದ ಹಾರವನ್ನು ತೀರ್ಥಹಳ್ಳಿಯ ರಥಬೀದಿಯ ಗಾಂಧಿ ಚೌಕದಲ್ಲಿ ಆರ್ ಎಂ ಮಂಜುನಾಥ್ ಗೌಡರಿಗೆ ಹಾಕಿ ಅಭಿಮಾನ ಮೆರೆದರು.ಕಾರ್ಯಕ್ರಮಕ್ಕೆ ನಾನಾ ಕಡೆಯಿಂದ ಸು ಮೂರುವರೆ ಸಾವಿರ ಕಾರ್ಯಕರ್ತರು, ಅಭಿಮಾನಿಗಳು ಸೇರಿದ್ದರು.

ಕಾರ್ಯಕ್ರಮವು ಹಿರಿಯ ಸಹಕಾರಿ ಅಧ್ಯಕ್ಷರಾದ ಸಹಕಾರಿ ರತ್ನ ವಿಜೇತ ಶ್ರೀ ವಿಜಯದೇವ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಿದ್ದು, ಕಾರ್ಯಕ್ರಮದಲ್ಲಿ ತೀರ್ಥಹಳ್ಳಿ ಅಧಿಕಾರಿಯಾದ ಪ್ರತಿಮಾರ ಅಕಾಲಿಕ ಮರಣ ಹೊಂದಿದ್ದ ಹಿನ್ನಲೆ ಮೌನಾಚರಣೆ ಮಾಡಿ ಅವರ ದಿವ್ಯಾತ್ಮಕ್ಕೆ ಶಾಂತಿ ಕೋರಲಾಯಿತು.ಕಾರ್ಯಕ್ರಮವು ಹಿರಿಯ ಸಹಕಾರಿ ಅಧ್ಯಕ್ಷರಾದ ಸಹಕಾರಿ ರತ್ನ ವಿಜೇತ ಶ್ರೀ ವಿಜಯದೇವ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಿದ್ದು, ಕಾರ್ಯಕ್ರಮದಲ್ಲಿ ತೀರ್ಥಹಳ್ಳಿ ಅಧಿಕಾರಿಯಾದ ಪ್ರತಿಮಾರ ಅಕಾಲಿಕ ಮರಣ ಹೊಂದಿದ್ದ ಹಿನ್ನಲೆ ಮೌನಾಚರಣೆ ಮಾಡಿ ಅವರ ದಿವ್ಯಾತ್ಮಕ್ಕೆ ಶಾಂತಿ ಕೋರಲಾಯಿತು.

ಕಾರ್ಯಕ್ರಮದ ಅಧ್ಯಕ್ಷರಾದ ಸಹಕಾರಿ ವಿಜಯದೇವ್ ಮಾತನಾಡಿ ” ಇದು ತೌರೂರ ಸಂಮಾನ ಅಲ್ಲ ಮನೆ ಮಗನಿಗೆ ಸನ್ಮಾನ. ಇವತ್ತು ಸಹಕಾರ ವ್ಯವಸ್ಥೆಯಲ್ಲಿ ನಾವೆಲ್ಲರೂ ಇದ್ದೇವೆ ಇದು ಕೇವಲ ಶೇ 10% ಮಾತ್ರ ನಾವು ತೋರಿಸಿದ್ದೇವೆ. ಇದು ಮುಗಿದಿಲ್ಲ ಈಗ ಆರಂಭ ನಾವೆಲ್ಲರೂ ಸಹಕಾರಿಗಳು ಮತ್ತೆ ಸೇರೋಣ ಎಂದರು.

ಜಿಲ್ಲಾ ಸಹಕಾರಿ ಅಧ್ಯಕ್ಷ ರತ್ನಾಕರ ಮಾತನಾಡಿ ” ತೀರ್ಥಹಳ್ಳಿ ಸಹಕಾರ ಸಂಘದ ಏಳಿಗೆಗೆ ಮಂಜುನಾಥ್ ಗೌಡರ ಕೊಡುಗೆ ಅಪಾರ ಇಂದು ಅವರಿಗೆ ತೌರೂರ ಸಂಮಾನ ಖುಷಿ ಕೊಟ್ಟಿದೆ”

ಕಿಮ್ಮನೆ ರತ್ನಾಕರ್ ಮಾತನಾಡಿ “ಸಹಕಾರಿಗಳು ಹಾಗೂ ಸ್ನೇಹಿತರು ಆದ ಆರ್ ಎಂ ಮಂಜುನಾಥ್ ಗೌಡರು ಸಹಕಾರಿ ರಂಗದಲ್ಲಿ ಪಕ್ಷಾತೀತವಾಗಿ ಭಾಗವಹಿಸುವಿಕೆಗೆ ಅಭಿನಂದಿಸುವೆ. ಆರ್ ಎಂ ಎಂ ರಿಗೆ ಬೆಂಬಲ ನೀಡುವಲ್ಲಿ ನಾನು ಮೊದಲಿಗ, ನಾವು ಒಟ್ಟಾಗಿ ದುಡಿದಿದ್ದೇವೆ ಒಟ್ಟಾಗಿ ಜಗಳ ಆಡಿದ್ದೇವೆ. ಸಹಕಾರಿ ರಂಗದ ಸಾಧನೆಗೆ ನಿಮಗೆ ಸಿಕ್ಕ ತವರೂರ ಸನ್ಮಾನ ಕಾರ್ಯಕ್ರಮ ವಿಶೇಷವಾಗಿದೆ ನಿಮ್ಮೊಂದಿಗೆ ಮುಂದಿನ ದಿನಗಳಲ್ಲಿ ನಾವಿದ್ದೇವೆ ಎಂದರು.

ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ “ತುಳಿತಕ್ಕೆ ಒಳಗಾಗೋದು ಸಹಜ ಅದನ್ನ ಮೆಟ್ಟಿ ನಿಲ್ಲೋದು ನಮ್ಮ ಕರ್ತವ್ಯ. ನಮ್ಮ ಆರ್ ಎಂ ಮಂಜುನಾಥ್ ಗೌಡರು ಅವರು ಪಿನಿಕ್ಸ್ ಹಕ್ಕಿಯಂತೆ ಸಹಕಾರ ಕ್ಷೇತ್ರದಲ್ಲಿ, ರಾಜಕೀಯ ರಂಗದಲ್ಲಿ ಸ್ವಲ್ಪ ಏರು ಪೇರಾದರು ಮತ್ತೆ ಎದ್ದು ಬರುತ್ತಾರೆ.ರಾಜಕೀಯ ನಿಂತ ನೀರಲ್ಲ ಮತ್ತೆ ಅವಕಾಶವಿದೆ ಎಂದರು.

ಇನ್ನು ಕಾರ್ಯಕ್ರಮದ ಕೇಂದ್ರ ಬಿಂದುವಾದ ಆರ್ ಎಂ ಮಂಜುನಾಥ್ ಗೌಡ ಮಾತನಾಡಿ “ನನಗೆ ಸನ್ಮಾನಗಳು ನಮ್ಮ ನೈತಿಕ ಶಕ್ತಿಯನ್ನು ಹೆಚ್ಚಿಸುತ್ತದೆ, ಈ ವೇಳೆ ನನ್ನ ರಾಜಕೀಯ ಗುರು ಜೆ ಹೆಚ್ ಪಟೇಲರನ್ನು ನೆನಪು ಮಾಡುವೆ. ಸಹಕಾರಿಗಳೆಲ್ಲರೂ ಸೇರಿ ಈ ಸನ್ಮಾನ ಇತಿಹಾಸದಲ್ಲಿ ನೆನಪಿಡುವಂತೆ ಮಾಡಿದ್ದೀರಿ. ಮುಂದೆ ಕೂಡಾ ರೈತರ ಏಳಿಗೆಗೆ ದುಡಿಯುತ್ತೇನೆ. ಇಂತಹ ಅವಕಾಶ ಕೊಟ್ಟ ಸಹಕಾರಿ ಅಧ್ಯಕ್ಷರಾದ ವಿಜಯದೇವ್ ಅವರಿಗೆ ಹಾಗೂ ಎಲ್ಲರಿಗೂ ನನ್ನ ಮನದಾಳದ ಧನ್ಯವಾದ ಅರ್ಪಿಸುತ್ತೇನೆ.

ಕಾರ್ಯಕ್ರಮದಲ್ಲಿ ಸಹಕಾರಿ ಅಧ್ಯಕ್ಷ ವಿಜಯ ದೇವ್, ಗೋಪಾಲಕೃಷ್ಣ, ಕಿಮ್ಮನೆ ರತ್ನಾಕರ್ ಸುಂದರೇಶ್ ಹೆಚ್ ಎಸ್,ಕಲಗೋಡು ರತ್ನಾಕರ್,ಕೆಸ್ತೂರ್ ಮಂಜುನಾಥ್, ಮುಡುಬಾ ರಾಘವೇಂದ್ರ, ಆಯನೂರು ಮಂಜುನಾಥ್ ಹೆಚ್ಎಸ್ ಷಡಕ್ಷರಿ, ಗೀತಾ ರಮೇಶ್,ರಾಜಣ್ಣ ರೆಡ್ಡಿ, ಯೋಗೇಶ್, ಶ್ರೀಪಾದ ಹೆಗಡೆ,ದುಗ್ಗಪ್ಪಗೌಡ, ಎಲ್ಎನ್ ಪರಮೇಶ್, ಕೆ ಏನ್ ಸುಧೀರ್,ಜಿ ಎಚ್ ನಾರಾಯಣ, ವೆಂಕಟೇಶ ಹೆಚ್ಎಸ್, ವಿದ್ಯಾಧರ್,ಮಧುಸೂದನ್,ಜಗದೀಶ್, ನಾಗರಾಜ್ ಮತ್ತಿತರು ಇದ್ದರು. ಕಾರ್ಯಕ್ರಮದ ಪ್ರಾರ್ಥನೆ ಉಷಾ ನಡೆಸಿ ಕೊಟ್ಟರು.ಸ್ವಾಗತ ಭಾಷಣ ವನ್ನು ಮಹಾಬಳೇಶ್ವರ ಹೆಗಡೆಯವರು ನಡೆಸಿಕೊಟ್ಟರು.

Leave a Reply

Your email address will not be published. Required fields are marked *