
ತೀರ್ಥಹಳ್ಳಿ :ದಿನಾಂಕ:15-09-2025 ರಂದು ಮಧ್ಯಾಹ್ನ ಸಾಮಾಜಿಕ ಹಾಗೂ ಶೈಕ್ಷಣಿಕ ಗಣತಿಗೆ ನಿಯೋಜನೆ ಮಾಡಿರುವ ಶಿಕ್ಷಕರು/ಶಿಕ್ಷಕಿಯರಿಗೆ ಬಾಳೆಬೈಲ್ ಪದವಿಕಾಲೇಜಿನಲ್ಲಿ ತರಬೇತಿ ಹಮ್ಮಿಕೊಳ್ಳಲಾಗಿದ್ದು ತರಬೇತಿಗೆ ಹಾಜರಾದ ಶಿಕ್ಷಕರು ಹಾಗೂ ಕ.ರಾ.ಪ್ರಾ.ಶಾ.ಶಿಕ್ಷಕರ ಸಂಘದಿಂದ ತರಬೇತಿಗೆ ಹಾಜರಾಗದೆ ಪ್ರತಿಭಟಿಸಿದರು.

ಈ ಹಿಂದೆ ಮಾಡಿರುವ ಎಸ್ ಸಿ ಜಾತಿ ಸಮೀಕ್ಷೆಯ ಗೌರವ ಧನ ಹಾಗೂ ಯಾವುದೇ ಸೌಲಭ್ಯ ಇದುವರೆಗೆ ಬಾರದ ಕಾರಣ ಹಾಗೂ ನಿಯೋಜನೆ ಮಾಡಿರುವ ಗಣತಿದಾರರಲ್ಲಿ ಸಮಸ್ಯೆ ಇರುವವರಿಗೆ ವಿನಾಯಿತಿ ನೀಡುವ ಬಗ್ಗೆ, ಗೌರವ ಧನ ಹಾಗೂ ಗಳಿಕೆ ರಜೆ ನೀಡುವಂತೆ ಆಗ್ರಹ ಮಾಡಲಾಯಿತು.

ಜಿಲ್ಲಾ ಸಂಘ ಖಜಾಂಚಿ ಎಂ ಸಿ ಮಂಜುನಾಥ್ ಹಾಗೂ ತಾಲ್ಲೂಕು ಅಧ್ಯಕ್ಷರಾದ ಪುಟ್ಟಪ್ಪ ಮಾತನಾಡಿ ಆರೋಗ್ಯ ಸಮಸ್ಯೆ ಹಾಗೂ ಸಣ್ಣ ಮಕ್ಕಳಿರುವ ಶಿಕ್ಷಕಿಯರು 55 ಮೇಲ್ಪಟ್ಟ ಶಿಕ್ಷಕರಿಗೆ ಹಾಗೂ BLO ಶಿಕ್ಷಕರಿಗೆ ವಿನಾಯಿತಿ ನೀಡುವಂತೆ ಆಗ್ರಹಿಸಿದರು. ಶಿಕ್ಷಕರ ಪ್ರತಿಭಟನೆ ನಡೆಯುವ ಸ್ಥಳಕ್ಕೆ ಆಗಮಿಸಿದ ತಾಲ್ಲೂಕು ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಶೈಲಾ ಮಾತನಾಡಿ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ ಮೇಲೆ ಎಲ್ಲರೂ ಈ ದಿನ ತರಬೇತಿಯಲ್ಲಿ ಪಾಲ್ಗೊಂಡರು.ಸಂಘದ ಪ್ರಧಾನ ಕಾರ್ಯದರ್ಶಿ ಗಳಾದ ಲಕ್ಷ್ಮಣ್ ಹಾಗೂ ಸಂಘದ ಪದಾಧಿಕಾರಿಗಳಾದ ಶೋಭಲತಾ, ಮೂಕಾಂಬಿಕಾ,ಜಯಂತಿ, ಕೃಷ್ಣಮೂರ್ತಿ. ಮಂಜುನಾಥ್ ಕೆ.ಆರ್. ಆನಂದಕುಮಾರ್. ಎನ್.ಆರ್.ಹಾಗೂ ನೂರಾರು ಶಿಕ್ಷಕರು ಉಪಸ್ಥಿತರಿದ್ದರು.



