
ತೀರ್ಥಹಳ್ಳಿ : ಒಂದೇ ಜಾತಿ ಒಂದೇ ಮತ ಒಬ್ಬನೇ ದೇವರು ಎಂಬ ದಿವ್ಯ ವಾಣಿಯನ್ನು ಜಗತ್ತಿಗೆ ಸಾರಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶದಲ್ಲಿ ತೀರ್ಥಹಳ್ಳಿಯಲ್ಲಿ ಸಂತ ಶ್ರೀ ನಾರಾಯಣ ಗುರು ಸೌಹಾರ್ದ ಸಹಕಾರ ಸಂಘ ನಿ.ಸಂಸ್ಥೆಯನ್ನು ಸ್ಥಾಪಿಸಿದ್ದು .

ಈ ಸಂಸ್ಥೆ ಒಂದು ವರ್ಷ ಪೂರೈಸಿದ ಪ್ರಯುಕ್ತ ಉದ್ಘಾಟನಾ ಕಾರ್ಯಕ್ರಮ & ವಾರ್ಷಿಕ ಮಹಾಸಭೆಯನ್ನು ದಿನಾಂಕ. 22.09.2025 ನೇ ಸೋಮವಾರ ಬೆಳಗ್ಗೆ 10.30 ಕ್ಕೆ ಸರಿಯಾಗಿ ಅರ್ಯ ಈಡಿಗ ಸಮುದಾಯದ ಭವನದಲ್ಲಿ ನೆರವೇರಲಿದೆ. ಕಾರ್ಯಕ್ರಮಕ್ಕೆಸಮಾಜದ ಮಾರ್ಗದರ್ಶಕರು ಹಾಗೂ ಪೂಜ್ಯರೂ ಆದ ಸ್ವಾಮೀಜಿ ಶ್ರೀ ಶ್ರೀ ರೇಣುಕಾನಂದ ಸ್ವಾಮೀಜಿ, ಶ್ರೀ ಶ್ರೀ ಯೋಗೇಂದ್ರ ಅವದೂತರು,

ತೀರ್ಥಹಳ್ಳಿ ಶಾಸಕರದ ಆರಗ ಜ್ಞಾನೇಂದ್ರ, ಎಂ ಎ ಡಿ ಬಿ ಅಧ್ಯಕ್ಷರಾದ ಆರ್ ಎಂ ಮಂಜುನಾಥ್ ಗೌಡ್ರು, ಮಾಜಿ ಸಚಿವರಾದ ಕಿಮ್ಮನೆ ರತ್ನಕರ್, ವಿಶೇಷ ಆಹ್ವಾನಿತರಾಗಿ ರವಿಕುಮಾರ್ ರವರು ಆಗಮಿಸಲಿದ್ದಾರೆ.

ಹಾಗೂ ತೀರ್ಥಹಳ್ಳಿಯಲ್ಲಿ ಸಾಧನೆ ಮಾಡಿದ ಅಧಿಕಾರಿಗಳನ್ನು ಗುರುತಿಸಿ ಸನ್ಮಾನ ಕಾರ್ಯಕ್ರಮ ಕೂಡ ನೆರವೇರಲಿದ್ದು. ಈ ಕಾರ್ಯಕ್ರಮಕ್ಕೆ ಸರ್ವರನ್ನು ಹಾಗೂ ಕುಲ ಬಾಂಧವರನ್ನು ಸಂತ ಶ್ರೀ ನಾರಾಯಣ ಗುರು ಸೌಹಾರ್ದ ಸಹಕಾರ ಸಂಘ. ತೀರ್ಥಹಳ್ಳಿ ಅಧ್ಯಕ್ಷರಾದ ಶಿವು ಹೊದಲ ಆಹ್ವಾನಿಸಿದ್ದಾರೆ.


