

ಗೆದ್ದವರಿಗೆ 1.50ಲಕ್ಷ ಬಹುಮಾನ ಇಂದೇ ನೋಂದಾಯಿಸಿ
ತೀರ್ಥಹಳ್ಳಿ : ತಾಲೂಕಿನ ಗಾಯಿತ್ರಿ ಮಂದಿರದಲ್ಲಿ ಸೆ 28 ರಂದು ಮಂಜುಶ್ರೀ ಚಾರಿಟೇಬಲ್ ಟ್ರಸ್ಟ್ ತೀರ್ಥಹಳ್ಳಿ ಇವರ ವತಿಯಿಂದ ರಾಜ್ಯ ಮಟ್ಟದ ಚೆಸ್ ಮುಕ್ತ ರಾಪಿಡ್ ಪಂದ್ಯಾವಳಿ ಯನ್ನು ಏರ್ಪಡಿಸಲಾಗಿದೆ.


ಪಂದ್ಯಾವಳಿಯ ದಿನ ಘೋಷಣೆಯಾಗಿದ್ದು ಆಸಕ್ತರು ಕೂಡಲೇ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕೆಂದು ಆಯೋಜಕರು ಸತ್ಯಶೋಧ ಮಾಧ್ಯಮದ ಮೂಲಕ ಮನವಿ ಮಾಡಿದ್ದಾರೆ.


ಪಂದ್ಯಾವಳಿಯ ಪ್ರವೇಶ ಶುಲ್ಕ 700ರೂ ಆಗಿದ್ದು,ತೀರ್ಥಹಳ್ಳಿ ಶಾಸಕರಾದ ಆರಗ ಜ್ಞಾನೇಂದ್ರ, ಕಿಮ್ಮನೆ ರತ್ನಾಕರ್, ಆರ್ ಎಂ ಮಂಜುನಾಥ್ ಗೌಡ ಜೊತೆಗೆ ರಾಜಕೀಯ ಗಣ್ಯರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಮಂಜುನಾಥ್ :- 9448914718, ರಾಮು :- 9108673565,ಡಾ ಋತ್ವಿಕ್ ಎಂ :- 9945530466 ಇವರನ್ನು ಸಂಪರ್ಕಿಸಿ.

