ತೀರ್ಥಹಳ್ಳಿ : ತಾಲೂಕಿನಲ್ಲಿ ಈ ಭಾರಿ ಶ್ರೀ ರಾಮೇಶ್ವರ ದಸರಾ ಉತ್ಸವ ಸಮಿತಿ ವತಿಯಿಂದ ಅದ್ದೂರಿಯಾಗಿ ದಸರಾ ಹಬ್ಬವನ್ನು ಆಚರಿಸಲಾಗುತಿದೆ. ಸೆ. 29ರ ಸೋಮವಾರದಿಂದ ಅ. 2 ರ ತನಕ ನಡೆಯಲಿದ್ದು, ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಹಾಸ್ಯ ಕವಿಗೋಷ್ಠಿ, ಯುವ ದಸರಾ, ಮಹಿಳಾ ದಸರಾ, ಯುವ ಸೌರಭ, ಕಲಾ ದಸರಾ, ತೀರ್ಥಹಳ್ಳಿ ಸಾಂಸ್ಕೃತಿಕ ವೈವಿದ್ಯ, ಸ್ತಬ್ದ ಚಿತ್ರ, ಜಾನಪದ ಮೆರವಣಿಗೆ, ನೃತ್ಯ ವೈಭವ ಹಾಗೂ ಹುಲಿ ಹೆಜ್ಜೆ ಹೀಗೆ ಹಲವಾರು ವಿಷಯ ಕಾರ್ಯಕ್ರಮ ಈ ಭಾರಿಯ ದಸರಾ ಉತ್ಸವದಲ್ಲಿ ಕಾಣಬಹುದಾಗಿದೆ.

ಯುವ ಕೇಸರಿ ತೀರ್ಥಹಳ್ಳಿ-2025

ಈ ಸಮಿತಿಯ ವತಿಯಿಂದ ಕೊಪ್ಪ ಸರ್ಕಲ್ ಬಳಿ ಅದ್ಭುತವಾದ ಉಗ್ರನರಸಿಂಹ ವಿಗ್ರಹ ಮಹಾದ್ವಾರದೊಂದಿಗೆ ನವರಾತ್ರಿಯ ಮೊದಲದಿನದಿಂದ ಅನಾರವರಣಗೊಂಡಿದ್ದು ಈ ಬಾರಿಯ ದಸರಾಕ್ಕೆ ವಿಶೇಷ ಮೆರಗು ನೀಡಿದೆ.

2 ದಸರಾ ಕವಿಗೋಷ್ಠಿ”

ಪ್ರತಿ ವರ್ಷದಂತೆ ಸಾಂಸ್ಕೃತಿಕ ದಸರಾದ ಪ್ರಮುಖ ಕಾರ್ಯಕ್ರಮವಾದ ದಸರಾ ಕವಿಗೋಷ್ಠಿ ಈ ಬಾರಿಯೂ ನಡೆಯಲಿದ್ದು ರಾಜ್ಯದ ವಿವಿಧ ಭಾಗಗಳಿಂದ ಅನೇಕ ಕವಿಗಳು ಭಾಗವಹಿಸಲಿದ್ದಾರೆ. ಈ ಬಾರಿ ಹಾಸ್ಯ ಕವಿಗೋಷ್ಠಿ ಆಯೋಜನೆಗೊಂಡಿದ್ದು ಕುಪ್ಪಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಈ ಕಾರ್ಯಕ್ಕೆ ನೆರವಾಗಲಿದೆ. ದಿನಾಂಕ:-26-09-2025 ರ ಶುಕ್ರವಾರ ಬೆಳಿಗ್ಗೆ 11.00 ಗಂಟೆಗೆ ತುಂಗಾ ಮಹಾವಿದ್ಯಾಲಯದಲ್ಲಿ ನಡೆಯುವ ಈ ಕವಿಗೋಷ್ಠಿಯ ಉದ್ಘಾಟನೆಯನ್ನು ಕುವೆಂಪು ಪ್ರತಿಷ್ಠಾನದ ಸಮಕಾರ್ಯದರ್ಶಿ ಶ್ರೀ ಕಡಿದಾಳ್‌ ಪ್ರಕಾಶ್ ಇವರು ನೇರವೇರಿಸಲಿದ್ದಾರೆ. ತೀರ್ಥಹಳ್ಳಿ ಕ್ಷೇತ್ರದ ಶಾಸಕರಾದ ಶ್ರೀ ಆರಗ ಜ್ಞಾನೇಂದ್ರರವರು ಅಧ್ಯಕ್ಷತೆ ವಹಿಸಲಿದ್ದಾರೆ. ದಸರಾ -2025 ರ ಸಂಚಾಲಕರಾದ ಶ್ರೀ.ಸಂದೇಶ್ ಜವಳಿ, ಶ್ರೀ.ಅಮರನಾಥ್ ಶೆಟ್ಟಿ ಉಪಸ್ಥಿತರಿರುತ್ತಾರೆ. ತೀರ್ಥಹಳ್ಳಿ ಕನ್ನಡ ಸಾಹಿತ್ಯ ಪರಿಷತ್ ಈ ಕಾರ್ಯಕ್ರಮಕ್ಕೆ ಸಹಯೋಗವಿದೆ.

3 “ಮಕ್ಕಳ ಗುಂಪು ಭಜನಾ ಸ್ಪರ್ಧೆ”

27-09-2025 5 ದೇವಸ್ಥಾನದ ಅವರಣದಲ್ಲಿ ತೀರ್ಥಹಳ್ಳಿ ತಾಲ್ಲೂಕು ಮಟ್ಟದ 15 ವರ್ಷದ ವಯೋಮಾನದ ಒಳಗಿನ ಮಕ್ಕಳ ಗುಂಪು ಭಜನಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ.4 ಯುವ ದಸರಾ” ಮತ್ತು ” ಮಹಿಳಾ ದಸರಾ”ದ ಆಯೋಜನೆಯಲ್ಲಿ ಕೆಸರುಗದ್ದೆ ಕ್ರೀಡಾಕೂಟ ದಿನಾಂಕ:- 28-09-2025 ರ ಭಾನುವಾರ ಬೆಳಿಗ್ಗೆ 11.00 ಗಂಟೆಯಿಂದ ತೀರ್ಥಹಳ್ಳಿಯ ಕುರುವಳ್ಳಿಯ ರಿಂಗ್ ರೋಡ್ ಸಮೀಪ ನಿರ್ಮಾಣ ಮಾಡಲಾದ ಕೆಸರುಗದ್ದೆಯಲ್ಲಿ ಕೆಸರುಗದ್ದೆ ಕ್ರೀಡಾಕೂಟವನ್ನು ಆಯೋಜಿಸಲಾಗಿದ್ದು. ಈ ಕ್ರೀಡಾಕೂಟದಲ್ಲಿ ಪುರುಷರಿಗೆ ಮತ್ತು ಮಹಿಳೆಯರಿಗೆ ಹಗ್ಗಜಗ್ಗಾಟ, ಕೆಸರು ಗದ್ದೆಓಟ ಮತ್ತು ಗಿರಿಗಿಟ್ಟೆ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.ಆಯೋಜಿಸಲಾಗಿದೆ. ಈಗಾಗಲೇ ಈ ಎಲ್ಲಾ ಸ್ಪರ್ಧೆಗೆ 60 ಕ್ಕೂ ಹೆಚ್ಚು ತಂಡಗಳು. ನೊಂದಾಯಿತವಾಗಿದೆ. ಕೆಸರುಗದ್ದೆ ಕ್ರೀಡಾಕೂಟದ ಉದ್ಘಾಟನೆಯನ್ನು ಕಿರುತೆರೆಯ ನಟ ತೀರ್ಥಹಳ್ಳಿಯ ಪ್ರತಿಭೆ ಶ್ರೀ ಹುಲಿ ಕಾರ್ತಿಕ್ ನೆರವೇರಿಸಲಿದ್ದಾರೆ.

5 “ಯುವ ದಸರಾ ಸಾಂಸ್ಕೃತಿಕ ಕಾರ್ಯಕ್ರಮ”

ದಿನಾಂಕ:-29-09-2025 ರ ಸೋಮವಾರ ಕುಶಾವತಿಯ ನೆಹರು ಪಾರ್ಕಿನಲ್ಲಿ ನಿರ್ಮಾಣವಾದ ಬೃಹತ್ ವೇದಿಕೆಯಲ್ಲಿ “ಯುವ ದಸರಾ” ದ “ಯುವ ಸೌರಭ” ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ.ಶಿವಮೊಗ್ಗ ಜಿಲ್ಲೆಯ ಅನೇಕ ಯುವ ಪ್ರತಿಭೆಗಳು ಈ ವೇದಿಕೆಯಲ್ಲಿ ತಮ್ಮ ಕಾರ್ಯಕ್ರಮ ನೀಡಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶಿವಮೊಗ್ಗ ಇವರ ಪ್ರಾಯೋಜಕತ್ವದಲ್ಲಿ ನಡೆಯುವ ಕಾರ್ಯಕ್ರಮದ ಉದ್ಘಾಟನೆಯನ್ನು ತೀರ್ಥಹಳ್ಳಿ ಕ್ಷೇತ್ರದ ಶಾಸಕರಾದ ಶ್ರೀ ಆರಗ ಜ್ಞಾನೇಂದ್ರ ನೆರವೇರಿಸಲಿದ್ದಾರೆ. ಖ್ಯಾತ ಚಲನಚಿತ್ರ ನಟಿ ಕಾರುಣ್ಯರಾಮ್ ಇವರು ವಿಶೇಷ ಅತಿಥಿಯಾಗಿ ಅಗಮಿಸಲಿದ್ದಾರೆ. ಮಲೆನಾಡು ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು, ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷರಾದ ಶ್ರೀ ಆರ್ ಎಂ ಮಂಜುನಾಥ ಗೌಡ, ತಾಲ್ಲೂಕು ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷರಾದ ಶ್ರೀ ನಾಬಳ ಸಚೀಂದ್ರ ಹೆಗ್ಡೆ, ತೀರ್ಥಹಳ್ಳಿಯ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಶ್ರೀ ರೆಹಮತ್ ಉಲ್ಲಾ ಅಸಾದಿ, ದಸರಾ ಸಮಿತಿಯ ಅಧ್ಯಕ್ಷರಾದ ತಹಶೀಲ್ದಾರ್ ಶ್ರೀ ರಂಜಿತ್ ಕೆ.ಎಸ್. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ಶೈಲಾ, ಪೋಲಿಸ್ ಉಪಾಧೀಕ್ಷಕರಾದ ಶ್ರೀ ಅರವಿಂದ ಕಲಗುಜ್ಜಿ, ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಾದ ಶ್ರೀ ಡಿ. ನಾಗರಾಜ್ ಮತ್ತು ದಸರಾ -2025 ರ ಸಂಚಾಲಕರಾದ ಶ್ರೀ. ಸಂದೇಶ್ ಜವಳಿ, ಶ್ರೀ. ಅಮರ್‌ನಾಥ ಶೆಟ್ಟಿ ಉಪಸ್ಥಿತರಿರುತ್ತಾರೆ.

6 “ಕಲಾ ದಸರಾ

ಮೊಟ್ಟ ಮೊದಲಬಾರಿಗೆ ಈ ಬಾರಿ ದಸರಾ ಉತ್ಸವಕ್ಕೆ ವಿಶೇಷ ಮೆರಗು ನೀಡುವ ಚಿತ್ರಕಲಾ ಮತ್ತು ಛಾಯಾಚಿತ್ರ ಪ್ರದರ್ಶನಗಳ “ಕಲಾ ದಸರಾ” ಕುಶಾವತಿ ನೆಹರು ಪಾರ್ಕಿನಲ್ಲಿ ಆಯೋಜನೆಗೊಂಡಿದ್ದು ತೀರ್ಥಹಳ್ಳಿಯ ಅನೇಕ ಕಲಾವಿದರ ಕಲಾಕೃತಿಗಳ ಪ್ರದರ್ಶನ ಆಯೋಜಿಸಲಾಗಿದೆ. ದಿ:-29-09-2025 ರಿಂದ ನಾಲ್ಕು ದಿನಗಳ ಕಾಲ ನಡೆಯುವ ಈ ಕಲಾ ಪ್ರದರ್ಶನವನ್ನು ಬೆಂಗಳೂರಿನ ಖ್ಯಾತ ಪಿಡಿಲಿಟಿಸ್ ಶ್ರೀ.ಅಚ್ಚುತ್ ಗೌಡ ರವರು ಉದ್ಘಾಟಿಸಲಿದ್ದಾರೆ.

7“ಮಹಿಳಾ ದಸರಾ“ದಿನಾಂಕ:- 30-09-2025 ರ ಮಂಗಳವಾರ ತೀರ್ಥಹಳ್ಳಿಯ ಇತಿಹಾಸದಲ್ಲಿ ಪ್ರಪ್ರಥಮವಾಗಿ ಮಹಿಳಾ ದಸರಾ ಆಯೋಜನೆಗೊಂಡಿದ್ದು ಈ ಕಾರ್ಯಕ್ರಮದಲ್ಲಿ ಮಹಿಳಾ ಹುಲಿನೃತ್ಯ, ಶಾಸ್ತ್ರೀಯ, ಜಾನಪದ ಮತ್ತು ಯೋಗನೃತ್ಯ ಹಾಗೂ ಪ್ಯಾಶನ್ ಶೋ ಕಾರ್ಯಕ್ರಮ ಕುಶಾವತಿ ನೆಹರು ಪಾರ್ಕಿನ ವೇದಿಕೆಯಲ್ಲಿ ನಡೆಯಲಿದೆ.

8 ತೀರ್ಥಹಳ್ಳಿ ಸಾಂಸ್ಕೃತಿಕ ವೈವಿಧ್ಯ”

ದಿನಾಂಕ:- 01-10-2025 ರ ಬುಧವಾರ ಕುಶಾವತಿ ನೆಹರು ಪಾರ್ಕಿನ ವೇದಿಕೆಯಲ್ಲಿ ತೀರ್ಥಹಳ್ಳಿ ತಾಲ್ಲೂಕಿನ ಉದಯೋನ್ಮುಖ ಕಲಾವಿದರ ಶಾಸ್ತ್ರೀಯ ನೃತ್ಯ, ರೂಪಕಗಳು, ಜಾನಪದ ನೃತ್ಯ, ಸಂಗೀತ, ಕಾರ್ಯಕ್ರಮ ನಡೆಯಲಿದೆ.

ವಿಜಯದಶಮಿಯ ಸಂಪ್ರದಾಯಿಕ ದಸರಾ ಉತ್ಸವ“ದಿನಾಂಕ:-02-10-2025 ರ ಗುರುವಾರ ಮಧ್ಯಾಹ್ನ 2.00 ಗಂಟೆಗೆ ಶ್ರೀ ರಾಮೇಶ್ವರ ದೇವಸ್ಥಾನದ ಆವರಣದಿಂದ ಶ್ರೀ ರಾಮೇಶ್ವರ ದೇವರ ಪಲ್ಲಕ್ಕಿ ಉತ್ಸವವು ಚಾಮುಂಡೇಶ್ವರಿ ದೇವಿಯ ಅಂಬಾರಿಯೊಂದಿಗೆ ಕರ್ನಾಟಕದ ಸುಪ್ರಸಿದ್ದ ಜಾನಪದ ಕಲಾ ತಂಡಗಳ ಮತ್ತು ಆಕರ್ಷಕ ಸ್ಥಬ್ಧಚಿತ್ರಗಳ ಸಾಂಪ್ರದಾಯಿಕ ಭಜನಾ ನೃತ್ಯಗಳೊಂದಿಗೆ ಮೆರವಣಿಗೆಯಲ್ಲಿ ಕುಶಾವತಿಯ ನೆಹರು ಉದ್ಯಾನವನಕ್ಕೆ ತೆರಳಿ ಬನ್ನಿ ಪೂಜೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಸಂಜೆ.5.30 ಗಂಟೆಗೆ ಉಡುಪಿಯ ವಿದೂಷಿ ಡಾ| ಮಂಜರಿ ಚಂದ್ರ ಪುಷ್ಪರಾಜ್ ನಿರ್ದೇಶನದ ಸೃಷ್ಟಿನೃತ್ಯ ಕಲಾಕುಟಿರ (ರಿ) ಇವರ ಪ್ರಸ್ತುತಿಯ ನೃತ್ಯ ವೈಭವ ಕಾರ್ಯಕ್ರಮ ನಡೆಯಲಿದೆ. ನಂತರ ನಡೆಯುವ ಸಭಾ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಗಣ್ಯರಿಗೆ ಸಂಪ್ರದಾಯದಂತೆ ಗೌರವಿಸುವ ಕಾರ್ಯಕ್ರಮವಿರುತ್ತದೆ.ದಸರಾ ಮೆರವಣಿಗೆಗೆ ಮತ್ತು ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಕ್ಷೇತ್ರದ ಶಾಸಕರಾದ ಶ್ರೀ ಆರಗ ಜ್ಞಾನೇಂದ್ರರವರು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರಾದ ಶ್ರೀ ಕಿಮ್ಮನೆ ರತ್ನಾಕರ್ ರವರು, ಮಲೆನಾಡು ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು, ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷರಾದ ಶ್ರೀ ಆರ್ ಎಂ ಮಂಜುನಾಥ ಗೌಡ, ತಾಲ್ಲೂಕು ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷರಾದ ಶ್ರೀ ನಾಬಳ ಸಚೀಂದ್ರ ಹೆಗ್ಡೆ, ತೀರ್ಥಹಳ್ಳಿಯ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಶ್ರೀ ರೆಹಮತ್ ಉಲ್ಲಾ ಅಸಾದಿ, ರಾಮೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಶ್ರೀ ಡಿ.ಎಸ್ ವಿಶ್ವನಾಥ್ ಶೆಟ್ಟಿ, ಯುವನಾಯಕರು ಪ್ರಗತಿಪರ ಕೃಷಿಕರಾದ ಶ್ರೀ ಆರ್ ಮದನ್, ತಾಲ್ಲೂಕು ಬಿಜೆಪಿ ಅಧ್ಯಕ್ಷರಾದ ಶ್ರೀ ನವೀನ್ ಹೆದ್ದೂರ್, ತೀರ್ಥಹಳ್ಳಿ ಬ್ಲಾಕ್ ಕಾಂಗ್ರೇಸ್‌ನ ಅಧ್ಯಕ್ಷರಾದ ಶ್ರೀ ಕೆಸ್ತೂರು ಮಂಜುನಾಥ್ ಮತ್ತು ಶ್ರೀ ಮುಡುಬ ರಾಘವೇಂದ್ರ ಇವರು ಅಗಮಿಸಲಿದ್ದಾರೆ.ಸಭೆಯ ಅಧ್ಯಕ್ಷತೆಯನ್ನು ದಸರಾ ಸಮಿತಿಯ ಅಧ್ಯಕ್ಷರಾದ ತಹಶೀಲ್ದಾರ್ ಶ್ರೀ ರಂಜಿತ್ ಕೆ.ಎಸ್ ಇವರು ವಹಿಸಲಿದ್ದಾರೆ.ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿಯಾದ ಶ್ರೀಮತಿ ಶೈಲಾ, ಪೋಲಿಸ್ ಉಪಾಧೀಕ್ಷಕರಾದ ಶ್ರೀ ಅರವಿಂದ ಕಲಗುಜ್ಜಿ, ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಾದ ಶ್ರೀ ಡಿ. ನಾಗರಾಜ್, ದಸರಾ -2025 ರ ಸಂಚಾಲಕರಾದ ಶ್ರೀ. ಸಂದೇಶ್ ಜವಳಿ, ಶ್ರೀ. ಅಮರನಾಥ್ ಶೆಟ್ಟಿ, ಆರ್ಥಿಕ ಸಮಿತಿಯ ಸಂಚಾಲಕರಾದ ಶ್ರೀ. ಸೊಪ್ಪುಗುಡ್ಡೆ ರಾಘವೇಂದ್ರ ಮತ್ತು ಶ್ರೀ ರಾಘವೇಂದ್ರ ರವೀಂದ್ರ ಶೆಟ್ಟಿ ಇವರುಗಳ ಉಪಸ್ಥಿತಿ ಇರುತ್ತದೆ.

* ಮಲೆನಾಡಿನ ಸಾಂಪ್ರದಾಯಿಕ ಜಾನಪದ ಹುಲಿ ಕುಣಿತ ಹುಲಿಹೆಜ್ಜೆ“ಸಂಜೆ 8.00 ಗಂಟೆಗೆ ಸರಿಯಾಗಿ ಕುಶಾವತಿಯ ದಸರಾ ವೇದಿಕೆಯಲ್ಲಿ ಮಲೆನಾಡಿನ ಸಾಂಪ್ರದಾಯಿ ಜಾನಪದ ಕಲಾ ಪ್ರಕಾರದ ಅಕರ್ಷಕ ಹುಲಿಕುಣಿತದ ಸ್ಪರ್ಧೆ ಹುಲಿಹೆಜ್ಜೆ ಅಯೋಜಿತಗೊಂಡಿ ತೀರ್ಥಹಳ್ಳಿಯ ಅನೇಕ ಹೆಸರಾಂತ ಹುಲಿಕುಣಿತದ ಕಲಾವಿದರು ಈ ಸ್ಪರ್ಧೆಯಲ್ಲಿ ಭಾಗವ ತೀರ್ಥಹಳ್ಳಿಯ ದಸರಾ ಉತ್ಸವಕ್ಕೆ ವಿಶೇಷ ಮೆರಗನ್ನು ನೀಡಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ರಾಮೇಶ್ವರ ದಸರಾ ಉತ್ಸವ ಸಮಿತಿಯ ಸಂಚಾಲಕರುಗಳಾದ. ಸಂದೇಶ ಜವಳಿ, ಅಮರಾನಾಥ್ ಶೆಟ್ಟಿ, ವಿಶ್ವನಾಥ್ ಶೆಟ್ಟಿ, ಹೆದ್ದೂರ್ ನವೀನ್, ಕೆಸ್ತೂರು ಮಂಜುನಾಥ್, ಸೊಪ್ಪುಗುಡ್ಡೆ ರಾಘವೇಂದ್ರ, ಚಂದವಳ್ಳಿ ಸೋಮವಾರ, ರಾಘವೇಂದ್ರ ಶೆಟ್ಟಿ, ವಾದಿರಾಜ್ ಭಟ್, ಬಿ ಗಣಪತಿ, ಕುಕ್ಕೆ ಪ್ರಶಾಂತ್, ಗೀತಾ ರಮೇಶ್ ಇದ್ದರು.

Leave a Reply

Your email address will not be published. Required fields are marked *