

ಶಿವಮೊಗ್ಗ: ಮಲೆನಾಡಿನ ವಿವಿಧ ಭಾಗಗಳಲ್ಲಿ ಕಳೆದ ಕೆಲ ದಿನಗಳಿಂದ ನಿರಂತರ ಮಳೆಯಾಗುತಿರುವ ಹಿನ್ನಲೆಯಲ್ಲಿ ಕೆಲವೆಡೆ ಹಾನಿ ಸಂಭವಿಸಿದ್ದು, ಸಾವಿರಾರು ರೈತರು ತಮ್ಮ ಬೆಳೆಗಳನ್ನು ಕಳೆದುಕೊಂಡಿದ್ದಾರೆ.

ಅಡಿಕೆ, ಭತ್ತ ಮುಂತಾದ ಬೆಳೆಗಳಿಗೆ ಅಪಾಯ ಕಟ್ಟಿಟ್ಟಬುತ್ತಿ ಕೊಳೆ ರೋಗ, ಹರಳು ಉದುರುವುದು ಹೀಗೆ ಹಲವಾರು ರೋಗಗಳು ಪಸಲಿಗೆ ಹಾನಿ ಮಾಡುತ್ತಿದ್ದು,ಜೊತೆಗೆ ಮಲೆನಾಡಿನ ಹಲವೆಡೆ ಕಾಡುಕೋಣ, ಕಾಡಾನೆ ಯಂತಹ ಪ್ರಾಣಿಗಳಿಂದ ಬೆಳೆ ನಾಶವಾಗುತ್ತಿದ್ದು ರೈತರು ಆತಂಕದಲ್ಲಿದ್ದಾರೆ.

ಜೊತೆಗೆ ಮರಗಳು ಧರೆಗುರುಳಿರುವ, ಮನೆಗಳಿಗೆ ಹಾನಿಯಾದ ಪ್ರಕರಣಗಳು ಹೆಚ್ಚಾಗಿದ್ದು,ರಸ್ತೆ ಸಂಪರ್ಕ ಕಡಿತಗೊಂಡಿರುವ ಮಾಹಿತಿಗಳು ಲಭ್ಯವಾಗಿದ್ದು ಒಟ್ಟಿನಲ್ಲಿ ಮಲೆನಾಡಿನ ಜನರ ಜೀವನ ಮೂರಾಬಟ್ಟೆಯಾಗಿದಂತೂ ನಿಜ.


