ಶಿವಮೊಗ್ಗ : ನಗರದಲ್ಲಿ ದಸರಾ ರಂಗು ಜೋರಾಗಿದ್ದು ಇಂದು ಆಹಾರ ದಸರಾದಲ್ಲಿ ರಾಜ್ಯ ಮಟ್ಟದ ಟಿವಿ ಚಾನೆಲ್ ವರದಿಗಾರ ಆಟ ಮುಗಿದ ನಂತರ ಬಾಳೆಹಣ್ಣು ತಿನ್ನಲು ಮುಂದಾದಾಗ ಒಂದೇ ಒಂದು ಬಾಳೆ ಹಣ್ಣು ತೆಗೆದುಕೊಂಡ ವಿನಯ್ ನನ್ನ ಪೌರ ಕಾರ್ಮಿಕರು ತಡೆದಿದ್ದು, ನಂತರ ಕೆಲವರು ಹಲ್ಲೆ ಮಾಡಲು ಮುಂದಾಗಿದ್ದಾರೆ.

ಜೊತೆಗೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಾರೆ. ಹಲ್ಲೆ ನಡೆಸಿದ ಸಿಬ್ಬಂದಿಗಳು ಯಾರೆಂದು ಗೊತ್ತಿದರು ಆತನ ಹೆಸರು ಪ್ರಕಟಿಸಿಲ್ಲ ಈ ಪ್ರಕರಣ ಸಂಬಂಧ ಆಯುಕ್ತರ ಗಮನಕ್ಕೆ ತಂದಿದ್ದೇನೆ ಎಂದು ಪತ್ರಕರ್ತ ವಿನಯ್ ತೇಕ್ಲೆ ಸತ್ಯಶೋಧ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.ಇನ್ನು ಪತ್ರಕರ್ತರ ಸ್ವಾಭಿಮಾನಕ್ಕೆ ದಕ್ಕೆಯಾಗುತ್ತಿರುವ ಪ್ರಕರಣಗಳು ವರದಿಯಾಗುತ್ತಿದ್ದರು ಸರ್ಕಾರ ಈ ಬಗ್ಗೆ ಯಾವ ಕ್ರಮ ಕೈಗೊಳ್ಳಲಿದೆ ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *