

ಶಿವಮೊಗ್ಗ :ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನಲ್ಲೊಂದು ವಿಚಿತ್ರ ಘಟನೆಯೊಂದು ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ THE BHARATIYA NYAYA SANHITA (BNS), 2023 (U/s-115(2),r/w 3(5)) ಅಡಿಯಲ್ಲಿ ತೀರ್ಥಹಳ್ಳಿ ಪೊಲೀಸ್ ಸ್ಟೇಷನ್ನಲ್ಲಿ ಕೇಸ್ ದಾಖಲಾಗಿದೆ.

ತೀರ್ಥಹಳ್ಳಿಯ ಅಪಾರ್ಟ್ಮೆಂಟ್ನ ರೂಮ್ ಒಂದರಲ್ಲಿ ಕೆಲಸವೊಂದರ ನಿಮಿತ್ತ ರೂಮ್ವೊಂದರಲ್ಲಿ ನೆಲಸಿದ್ದ ದಂಪತಿ ಮಲಗಿದ್ದಾಗ ರೂಮ್ನೊಳಗೆ ನುಗ್ಗಿದ್ದ ಆರೋಪಿ ದಂಪತಿ ಮಲಗಿದ್ದಾಗ ಮಹಿಳೆಯ ಮೈಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ. ಈ ವಿಷಯ ತಿಳಿಯುತ್ತಲೇ ಪತಿಯು ಸಹ ಎದ್ದು ಬೆಡ್ ಬಳಿ ಪರಿಶೀಲಿಸಿದ್ದಾರೆ.

ಆಗ ಹೆಂಗಸರು ಧರಿಸುವ ಫ್ರಾಕ್ ಹಾಕಿದ್ದ ವ್ಯಕ್ತಿ ರೂಮ್ನ ಕಿಟಕಿಯಿಂದ ಹಾರಿ ಎಸ್ಕೇಪ್ ಆಗಿದ್ದಾನೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದ್ದು, ಪ್ರಕರಣ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದು ಆರೋಪಿಯ ಬಗ್ಗೆ ಶೋದ ನಡೆಸಿದ್ದಾರೆ.


