

ಶಿವಮೊಗ್ಗ ಜಿಲ್ಲಾ ಗ್ಯಾರೆಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಭೂಪಾಲ ಪ್ರತಿಕ್ರಿಯೆ

ಶಿವಮೊಗ್ಗ : ಮೂರು ತಿಂಗಳಿಂದ ‘ಗೃಹಲಕ್ಷ್ಮಿ’ ಯೋಜನೆಯ ಹಣ ಪಲಾನುಭವಿಗಳ ಖಾತೆಗೆ ಜಮೆಯಾಗದೆ, ರಾಜ್ಯದ ಲಕ್ಷಾಂತರ ಗೃಹ ಲಕ್ಷೀಯರ ದಸರಾ ಹಬ್ಬದ ಸಂಭ್ರಮ ಕುಂಟಿತವಾಗಿದೆ.ಫಲಾನುಭವಿಗಳ ಖಾತೆಗೆ ಜೂನ್ನಲ್ಲಿ 2,000 ರೂ. ಜಮೆಯಾಗಿದ್ದು ಜುಲೈ, ಆಗಸ್ಟ್, ಸೆಪ್ಟೆಂಬರ್ ಕಂತು ಬಾಕಿಯಿದೆ.2023ರ ಆಗಸ್ಟ್ನಲ್ಲಿ ಯೋಜನೆ ಶುರುವಾದ ನಂತರ ಕೆಲವು ತಿಂಗಳು ನಿರಂತರ ಹಣ ಜಮೆಮಾಡಲಾಯಿತು.

ಆದರೆ, ನಂತರದ ಅವಧಿಯಲ್ಲಿ ಮೂರು, ನಾಲ್ಕು ತಿಂಗಳು ಕಾಯುವಂತಾಗಿದೆ.ಗೃಹಲಕ್ಷ್ಮೀ ಹಣ, ಬಹುತೇಕ ಕುಟುಂಬಗಳ ಆರ್ಥಿಕ ಪರಿಸ್ಥಿತಿ ಸುಧಾರಿಸಿದ್ದು ಬಡವರು, ಮಧ್ಯಮ ವರ್ಗದ ಕುಟುಂಗಳು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿತ್ತು ಕೆಲವು ತಿಂಗಳಿಂದ ಹಣ ಬರದಿರುವುದು ಗೃಹಲಕ್ಷ್ಮಿಯರಿಗೆ ಬೇಸರ ತಂದಿದೆ.

ಇನ್ನು ಈ ಸಂಬಂಧ ಸತ್ಯಶೋಧ ಮಾಧ್ಯಮ ಶಿವಮೊಗ್ಗ ಜಿಲ್ಲಾ ಗ್ಯಾರೆಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರ ಭೂಪಾಲ ರವನ್ನು ಸಂಪರ್ಕಿಸಿದ್ದು ಗ್ಯಾರೆಂಟಿ ಯೋಜನೆಯಲ್ಲೊಂದಾದ ಗೃಹಲಕ್ಷ್ಮೀ ಯೋಜನೆ ಬಹಳಷ್ಟು ಕುಟುಂಬದ ಅಭಿವೃದ್ಧಿಗೆ ಕಾರಣವಾಗಿದೆ ಆದರೆ ಕಳೆದ 3 ತಿಂಗಳಿಂದ ತಾಂತ್ರಿಕ ದೋಷ ಉಂಟಾಗಿದೆ ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲ್ಲೂಕುವಾರು ಸು 394460 ಪಲಾನುಭವಿಗಳು ಇದ್ದು ಹಣ ಬಿಡುಗಡೆ ಕೂಡ ಆಗಿದೆ ಆದರೆ ತಾಂತ್ರಿಕ ದೋಷ ಉಂಟಾದ ಹಿನ್ನಲೆಯಲ್ಲಿ ಕೊಂಚ ಸಮಯ ಹಿಡಿಯುತಿದೆ. ಯಾವುದೇ ತೊಂದರೆ ಇಲ್ಲ ಮುಂದಿನ 8-10 ದಿನಗಳ ಒಳಗಾಗಿ ಹಣ ಜಮೆಯಾಗಲಿದೆ ಎಂದರು.

