

ಶಿವಮೊಗ್ಗ :ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದ ನೆಟ್ವರ್ಕ್ ಸಮಸ್ಯೆ ಬಗ್ಗೆ ಸತ್ಯಶೋಧ ಮಾಧ್ಯಮ ಹಲವಾರು ಬಾರಿ ವರದಿ ಮಾಡಿತ್ತು, ಇನ್ನು ಇದೇ ವಿಷಯಕ್ಕೆ ಸಂವಂಧಿಸಿದಂತೆ ಬಿಎಸ್ಎನ್ಎಲ್ ವತಿಯಿಂದ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ‘ಸ್ವದೇಶಿ 4ಜಿ’ ನೆಟ್ವರ್ಕ್ನ ಮೊಬೈಲ್ ಟವರ್ಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದು ಈ ಕಾರ್ಯಕ್ರಮದಲ್ಲಿ ಶಿವಮೊಗ್ಗ ಲೋಕಸಭೆ ಕ್ಷೇತ್ರ ವ್ಯಾಪ್ತಿಯ 90 ಮೊಬೈಲ್ ಟವರ್ಗಳು ಗ್ರಾಹಕರಿಗೆ ಸೇವೆ ನೀಡಲು ಸನ್ನದ್ದವಾಗಿವೆ.

ಶಿವಮೊಗ್ಗ ಕ್ಷೇತ್ರದಲ್ಲಿ ಪಶ್ಚಿಮಘಟ್ಟ ವ್ಯಾಪ್ತಿಯ ಕುಗ್ರಾಮಗಳಿಗೆ ಅನುಕೂಲವಾಗುತ್ತದೆ. ಈ ನೆಟ್ವರ್ಕ್ಗಳು ಸೌರಶಕ್ತಿ ಚಾಲಿತವಾಗಿದ್ದು ಭಾರತದ ಅತಿದೊಡ್ಡ ಹಸಿರು ಟೆಲಿಕಾಂ ಸೈಟ್ಗಳ ಸಮೂಹವನ್ನಾಗಿ ಮಾಡಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಶಿವಮೊಗ್ಗದ ತಾಲೂಕುವಾರು ಟವರ್ ಮಾಹಿತಿ
ಹೊಸನಗರ – 14ಸಾಗರ – 26ತೀರ್ಥಹಳ್ಳಿ – 16ಶಿವಮೊಗ್ಗ – 05ಶಿಕಾರಿಪುರ – 04ಸೊರಬ- 01ಭದ್ರಾವತಿ – 01ಬೈಂದೂರು – 23

