ಜಯಪುರ: ಜಯಪುರದಲ್ಲಿ ಸಮುದಾಯ ಆಸ್ಪತ್ರೆಯೂ 12 ರಿಂದ 14 ಕೋಟಿಗಳಷ್ಟು ವೆಚ್ಚಮಾಡಿ ಕಟ್ಟಡವನ್ನು ನಿರ್ಮಿಸಲಾಗಿದ್ದು, ಎರಡು ಮೂರು ಸಲ ಆಸ್ಪತ್ರೆಯ ಉದ್ಘಾಟನೆ ದಿನಾಂಕವನ್ನು ಬದಲಾವಣೆ ಮಾಡಲಾಗಿತ್ತು.ಈಗ ಮತ್ತೆ ಅಕ್ಟೋಬರ್ 6ನೇ ತಾರೀಖಿಗೆ ಇದ್ದ ಉದ್ಘಾಟನೆ ದಿನಾಂಕವನ್ನು 7ನೇ ತಾರೀಖಿಗೆ ಮುಂದೂಡಲಾಗಿದೆ.

ಅಕ್ಟೋಬರ್ 7ನೇ ತಾರೀಖಿಗೆ ಆಸ್ಪತ್ರೆ ಉದ್ಘಾಟನೆಗೊಳ್ಳುತ್ತಿರುವುದು ಮೇಗುಂದ ಹೋಬಳಿಯ ಬಡ ಕೂಲಿ ಕಾರ್ಮಿಕರಿಗೆ ಸಂತೋಷದ ವಿಚಾರವೇ, ಆದರೆ ಕೇವಲ ಕಟ್ಟಡ ಮಾತ್ರ ಉದ್ಘಾಟನೆ ಮಾಡಿದರೆ ಯಾರಿಗೂ ಪ್ರಯೋಜನವಿಲ್ಲ.ಆಸ್ಪತ್ರೆ ಉದ್ಘಾಟನೆ ಜೊತೆಗೆ ಸೇವೆಗೆ ಸಿಬ್ಬಂದಿಗಳನ್ನು ನೇಮಿಸಬೇಕು.

ಕಟ್ಟಡ ಉದ್ಘಾಟನೆ ಮಾಡಿ ಸೇವೆಗೆ ಸಿಬ್ಬಂದಿಗಳನ್ನು ನೇಮಿಸದಿದ್ದರೆ ಆಸ್ಪತ್ರೆ ಹೋರಾಟ ಸಮಿತಿಯ ವತಿಯಿಂದ ಉಗ್ರ ಹೋರಾಟವಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಇಲಾಖೆಗೆ ಎಚ್ಚರಿಕೆ ನೀಡಿದ್ದಾರೆ.ಹಾಗೆಯೇ ಈಗಾಗಲೇ ಎರಡು ತಿಂಗಳ ಹಿಂದೆ ಅಧಿಕೃತವಲ್ಲದಿದ್ದರೂ ಸೇವೆಯ ರೂಪದಲ್ಲಿ ಉದ್ಘಾಟನೆ ಮಾಡಲಾಗಿದೆ. ಆದರೆ ಇದುವರೆಗೂ ಸಮುದಾಯ ಆಸ್ಪತ್ರೆಗೆ ಸಿಗಬೇಕಾದ ಯಾವುದೇ ಉಪಕರಣಗಳಾಗಲಿ ಸಿಬ್ಬಂದಿಗಳಾಗಲಿ ನೇಮಿಸದೆ ಇರುವುದು ದುರಾದೃಷ್ಟಕರ.ಅಕ್ಟೋಬರ್ 7ನೇ ತಾರೀಖಿನಂದು ಸಮುದಾಯ ಆಸ್ಪತ್ರೆ ಉದ್ಘಾಟನೆಗೊಂಡ ಮರುದಿನದಿಂದಲೇ ಹೋಬಳಿಯ ಬಡ ಕೂಲಿ ಕಾರ್ಮಿಕರ ಸೇವೆಗೆ ಲಭ್ಯವಿರಬೇಕು ಎಂದು ಸಮುದಾಯ ಆಸ್ಪತ್ರೆಯ ಹೋರಾಟ ಸಮಿತಿಯ ಸದಸ್ಯರು ತಿಳಿಸಿದ್ದಾರೆ.ಈ ಸಂಧರ್ಭದಲ್ಲಿ ಹೋರಾಟ ಸಮಿತಿಯ ಅನಿಲ್ ಡಿಮೆಲ್ಲೋ, ರವಿಚಂದ್ರ, ಇಸ್ಮಾಯಿಲ್, ಹರೀಶ್ ಇದ್ದರು..

ವರದಿ: ಶಶಿ ಬೆತ್ತದಕೊಳಲು

Leave a Reply

Your email address will not be published. Required fields are marked *