

ಶಿವಮೊಗ್ಗ :ನಗರದ ಪ್ರಸಿದ್ಧ ಕೋಟೆ ಶ್ರೀ ಮಾರಿಕಾಂಬ ಜಾತ್ರೆಯ ದಿನಾಂಕ ನಿಗದಿ ಮಾಡಲಾಗಿದೆ. ಎರಡು ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯ ದಿನಾಂಕವನ್ನು ಸಾಮಾನ್ಯವಾಗಿ ಡಿಸೆಂಬರ್ ನಲ್ಲಿ ಪ್ರಕಟಿಸಲಾಗುತ್ತಿತ್ತು.ವರ್ಷ ಎರಡೂವರೆ ತಿಂಗಳ ಮೊದಲೇ ಜಾತ್ರೆಯ ದಿನಾಂಕ ಪ್ರಕಟಿಸಲಾಗಿದೆ. ಮಾರಿಕಾಂಬ ಜಾತ್ರೆಯ ಹಿಂದೆ ಮುಂದೆ 10 ದಿನಗಳ ಕಾಲ ಮದುವೆ, ನಾಮಕರಣ,

ನಿಶ್ಚಿತಾರ್ಥ ನಡೆಸುವುದಿಲ್ಲ.ಆದ್ದರಿಂದ 2026ರ ಫೆಬ್ರವರಿ 24 ರಿಂದ 28 ರವರೆಗೆ ಐದು ದಿನಗಳ ಕಾಲ ಕೋಟೆ ಮಾರಿಕಾಂಬ ದೇವಿ ಜಾತ್ರೆ ನಡೆಸಲು ಕೋಟೆ ಶ್ರೀ ಮಾರಿಕಾಂಬ ಸೇವಾ ಸಮಿತಿ ನಿರ್ಧಾರ ಕೈಗೊಂಡಿದೆ. ಇದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ. ಮದುವೆಗಳಿಗೆ ಆರು ತಿಂಗಳ ಮೊದಲ ಛತ್ರಗಳನ್ನು ಬುಕಿಂಗ್

ಮಾಡುವುದರಿಂದ ಮಾರಿಕಾಂಬ ಜಾತ್ರೆ ಯಾವ ದಿನಾಂಕ ನಡೆಸಲಾಗುವುದು ಎಂದು ಭಕ್ತರು ಕೇಳಿಕೊಂಡು ದೇವಾಲಯಕ್ಕೆ ಬರುತ್ತಿದ್ದರು.ಈ ಕಾರಣದಿಂದ ಬೇಗ ದಿನಾಂಕ ನಿಗದಿ ಪಡಿಸಲಾಗಿದೆ ಎಂದು ಕೋಟೆ ಶ್ರೀ ಮಾರಿಕಾಂಬ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ತಿಳಿಸಿದ್ದಾರೆ.


