

ತೀರ್ಥಹಳ್ಳಿ :ತಾಲ್ಲೂಕಿನ ಆಗುಂಬೆ ಹೋಬಳಿ ನಾಲೂರ್ ಸಮೀಪದಲ್ಲಿ ಅ. 5 ರ ಸಂಜೆ ವೇಳೆಗೆ ಚಲಿಸುತಿದ್ದ ಕಾರಿನ ಮೇಲೆ ಕಾಡುಕೋಣ ಏಕಾಏಕಿ ಹಾರಿದ ಪರಿಣಾಮ ಕಾರು ಸಂಪೂರ್ಣ ಜಖಂ ಆಗಿದೆ. ಸದ್ಯ ಕಾರಿನಲ್ಲಿದ ಪ್ರಯಾಣಿಕರು ಪ್ರಣಾಪಾಯದಿಂದ ಪಾರಾಗಿದ್ದಾರೆ.

ಇನ್ನು ಇತ್ತೀಚಿಗೆ ಕಾಡು ಪ್ರಾಣಿಗಳ ಹಾವಳಿ ಅತಿರೇಕವಾಗಿದ್ದು, ರಸ್ತೆಯಲ್ಲಿ ಪ್ರಾಣಿಗಳ ಸಾವು ಹಾಗೂ ವಾಹನ ಅಪಘಾತಗಳು ಹೇರಳವಾಗಿದ್ದ ಹಿನ್ನಲೆಯಲ್ಲಿ ಅರಣ್ಯ ಇಲಾಖೆಗೆ ಕಾಡುಪ್ರಾಣಿಗಳ ಸಂಚಾರ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.


