– ಅರೋಗ್ಯ ಇಲಾಖೆಯಿಂದ ತಪಾಸಣೆ-ದುರ್ಗಾದೇವಿಯ ಶಾಪವೋ, ಭೀಕರ ಖಾಯಿಲೆಯೋ?

ಬೆಳಗಾವಿ : ಜಿಲ್ಲೆಯ ರಾಮದುರ್ಗ ತಾಲೂಕಿನ ತುರನೂರ ಗ್ರಾಮದಲ್ಲಿ ಎರಡೂವರೆ ತಿಂಗಳ ಅವಧಿಯಲ್ಲಿ ಸುಮಾರು 30ಕ್ಕೂ ಅಧಿಕ ಜನ ಮೃತಪಟ್ಟಿರುವುದು ಗ್ರಾಮಸ್ಥರನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಗ್ರಾಮದ ಶ್ರೀ ದುರ್ಗಾದೇವಿ ಶಾಪದಿಂದ ಈ ಸರಣಿ ಸಾವುಗಳು ಸಂಭವಿಸಿವೆಯೇ ಎಂಬ ಪ್ರಶ್ನೆ ಕಾಡುತ್ತಿದೆ. ದೇವಸ್ಥಾನದ ಪೂಜಾರಿ ದೇವಿ ಮೇಲಿನ ಜಿಡ್ಡು ತೆಗೆಯುವಾಗ ಮೂರ್ತಿ ತುಸು ಪ್ರಮಾಣದಲ್ಲಿ ಆಕಸ್ಮಿಕವಾಗಿ ವಿರೂಪಗೊಂಡಿದೆ. ಇದಾದ ಬಳಿಕ ಗ್ರಾಮದಲ್ಲಿ ಪದೇ ಪದೇ ಸಾವು ಸಂಭವಿಸಿದ್ದು ದೇವಿ ಶಾಪದಿಂದಲೇ ಎಂದು ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದಾರೆ.ಅರೋಗ್ಯ ಸಮಸ್ಯೆಯಿಂದ ಹೀಗಾಗಿರಬಹುದು ಎಂದು ಅರೋಗ್ಯ ಇಲಾಖೆಯಿಂದ ಪರಿಶೀಲನೆ ನಡೆಸಲಾಗುತ್ತದೆ.