

ಸರ್ಕಾರಿ ಸ್ಥಳಗಳಲ್ಲಿ ಆರ್ಎಸ್ಎಸ್ (RSS) ಚಟುವಟಿಕೆಗಳಿಗೆ ನಿರ್ಬಂಧ ಹಾಕುವಂತೆ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಬರೆದಿದ್ದ ಪತ್ರಕ್ಕೆ ಸರ್ಕಾರ ಸ್ಪಂದಿಸಿದ್ದು, ಖಾಸಗಿ ಸಘ ಸಂಸ್ಥೆಗಳು ಸಂಘಟನೆಗಳು ಸಾರ್ವಜನಿಕ ಸ್ಥಳಗಳಲ್ಲಿ ಚಟುವಟಿಕೆಗಳನ್ನು ಕಾನೂನು ಬದ್ದವಾಗಿ ನಡೆಸಲು ಪೂರ್ವಾ ಅನುಮತಿ ಕಡ್ಡಾಯಗೊಳಿಸಲಾಗಿದೆ.

ಈ ಬಗ್ಗೆ ಇಂದು (ಅಕ್ಟೋಬರ್ 16) ಸಿಎಂ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದಲ್ಲಿ (Karnataka Cabinet) ಈ ತೀರ್ಮಾನ ಕೈಗೊಳ್ಳಲಾಗಿದೆ. ಈ ಮೂಲಕ RSS ಹೆಸರು ಉಲ್ಲೇಖ ಮಾಡದೆ ಅದರ ಕಾರ್ಯ ಚಟುವಿಟಕೆಗಳಿಗೆ ಕಡಿವಾಣ ಹಾಕಲು ಮುಂದಾಗಿದೆ.ಈಗಾಗಲೇ ಕಾನೂನು ಇಲಾಖೆ ವಿಧೇಯಕ ಸಿದ್ದಪಡಿಸಿ ಡ್ರಾಫ್ಟ್ ಮಾಡಿದ್ದು, ಸರ್ಕಾರಿ ಕಟ್ಟಡ, ಆವರಣ, ಆಸ್ತಿಗಳಲ್ಲಿ ಚಟುವಟಿಕೆ ನಿಯಂತ್ರಣ ನಿಯಮ ಸಿದ್ಧವಾಗಿದೆ.

ಯಾವುದೇ ಧಾರ್ಮಿಕ ರಾಜಕೀಯ ಕಾರ್ಯಕ್ರಮಕ್ಕೆ ಕಡ್ಡಾಯವಾಗಿ ಅನುಮತಿ ಪಡೆಯಬೇಕೆಂಬ ನಿಯಮ ಸಿದ್ಧವಾಗಿದ್ದು, ಜಿಲ್ಲಾಧಿಕಾರಿ ಜಿಲ್ಲಾ ವರಿಷ್ಠಾಧಿಕಾರಿಗೆ ಅನುಮತಿ ನೀಡುವ ಅಧಿಕಾರವಿದೆ.ನಿಯಮ ಮೀರಿ ಚಟುವಟಿಕೆ

ನಡೆಸಿದರೆ 2 ವರ್ಷ ಜೈಲು ಮತ್ತು 50 ಸಾವಿರ ದಂಡ ವಿಧಿಸಲಾಗುತ್ತದೆ. ಎರಡನೇ ಬಾರಿ ನಿಯಮ ಮೀರಿದರೆ 3 ವರ್ಷ ಜೈಲು ಶಿಕ್ಷೆ ರೂ. 1, ದಂಡ ವಿಧಿಸಲಾಗುತ್ತದೆ ಇದಕ್ಕೂ ಮೀರಿ ಮುಂದುವರಿದರೆ ನಿತ್ಯ 5 ಸಾವಿರ ತಂಡ ವಿಧಿಸುವ ನಿಯಮ ರೂಪಿಸಲಾಗಿದೆ.

