ತೀರ್ಥಹಳ್ಳಿ : ತಾಲೂಕಿನ ಆಗುಂಬೆ ಹೋಬಳಿಯ ಮೇಗರವಳ್ಳಿ ತಿರುವಿನಲ್ಲಿ ಕಾರೊಂದು ಅಪಘಾತಕ್ಕಿಡಾಗಿದ್ದ ಘಟನೆ ಅ. 23 ರ ಸಂಜೆ 5 ಗಂಟೆಗೆ ನಡೆದಿದೆ.ಶಿವಮೊಗ್ಗದಿಂದ ಮಂಗಳೂರು ಮಾರ್ಗವಾಗಿ ಚಲಿಸುತಿದ್ದ ಕಾರು ಮೇಗರವಳ್ಳಿ ತಿರುವಿನಲ್ಲಿ ಚಾಲಕನ ಹಿಡಿತಕ್ಕೆ ಸಿಗದೇ ಪಲ್ಟಿಯಾಗಿದ್ದು

ನಾಲ್ಕು ಚಕ್ರ ಮೇಲಾಗಿ ಬಿದ್ದ ಪರಿಣಾಮ ಕಾರು ಸಂಪೂರ್ಣ ಜಖಂ ಆಗಿದೆ ಈ ಘಟನೆಯಲ್ಲಿ ಕಾರಿನಲ್ಲಿದ್ದವರು ಉಡುಪಿ ಮೂಲದವರಾಗಿದ್ದು ಅದೃಷ್ಟವಶಾತ್ ಪಾರಾಗಿದ್ದಾರೆ. ತೀರ್ಥಹಳ್ಳಿಯ ಜೆ ಸಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.ಸದ್ಯ ಆಗುಂಬೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಜರುಗಿದೆ.

Leave a Reply

Your email address will not be published. Required fields are marked *