ದಲಿತ ಹುಡುಗನ ಮೇಲೆ ಹಲ್ಲೆ : ಚಿನ್ನ ಹಾಗೂ ನಗದು 1ಲಕ್ಷ ಕಳೆದಿದೆ ಹೊಣೆ ಯಾರು?

ತೀರ್ಥಹಳ್ಳಿ : ತಾಲೂಕಿನ ಸಾರ್ವಜನಿಕ ಕ್ರೀಡಾಂಗಣದಲ್ಲಿ ಪಟಾಕಿ ಮಳಿಗೆ ಇಟ್ಟುಕೊಂಡಿದ್ದ ವ್ಯಾಪಾರಿಗಳು ಹಾಗೂ ಕೆಲಸಕ್ಕಿರುವ ದಲಿತ ಹುಡುಗನ ಮೇಲೆ ಕೆಲವು ರಾಜಕೀಯ ಮುಖಂಡ ಜೊತೆಗೆ ಅವರ ತಂಡ ಬೈಕಿನಲ್ಲಿ ಬಂದು ಹಲ್ಲೆ ಮಾಡಿದ್ದು ಅಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಪಟಾಕಿ ಮಳಿಗೆ ಸುಟ್ಟು ಹಾಕುವುದಾಗಿ ಬೆದರಿಕೆ ಹಾಕಿದ್ದು ಬೆಳಕಿಗೆ ಬಂದಿದೆ.

ಇನ್ನು ಇಬ್ಬರಿಗೆ ಮೂರ್ನಾಲ್ಕು ಜನರಿಂದ ಹಲ್ಲೆ ಮಾಡಿದ್ದ ಪರಿಣಾಮ ಸರ್ಕಾರಿ ಆಸ್ಪತ್ರೆಗೆ ಹೋದಾಗ ಅವರನ್ನು ತಡೆದಿದ್ದಲ್ಲದೆ ಪೋಷಕರಿಗೂ ಬೆದರಿಕೆ ನೀಡಿದ್ದು, ಈ ಸಂಬಂಧ ಗಾಯಳುಗಳು ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಘಟನೆಯಲ್ಲಿ 50ಗ್ರಾಂ ಚಿನ್ನದ ಚೈನ್ ಹಾಗೂ 1 ಲಕ್ಷ ರು ನಗದು ಕಳೆದಿದ್ದು ಸದ್ಯ ಪೊಲೀಸ್ ವಿಚಾರಣೆ ನಂತರ ಪೂರ್ಣ ಮಾಹಿತಿ ಸಿಗಲಿದೆ.

Leave a Reply

Your email address will not be published. Required fields are marked *