
ಶೃಂಗೇರಿ : ತಾಲ್ಲೂಕಿನ ಕೆರೆಕಟ್ಟೆ ಸಮೀಪ ಕಾಡಾನೆ ತುಳಿದು ಇಬ್ಬರು ಮೃತಪಟ್ಟ ಘಟನೆ ವರದಿಯಾಗಿದ್ದು, ಮೃತಪಟ್ಟವರನ್ನು ಹರೀಶ್(50) ಮತ್ತು ಉಮೇಶ್ (50)ಎಂದು ಗುರುತಿಸಲಾಗಿದ್ದು ಮೃತರ ಬಗ್ಗೆ ಇನ್ನಷ್ಟು ಮಾಹಿತಿಗಳು ಇನ್ನಷ್ಟೇ ಹೊರ ಬರಬೇಕಿದೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗುಂಬೆ ಭಾಗದಲ್ಲಿ ಸಂಚರಿಸುತ್ತಿದ್ದ ಕಾಡಾನೆಯಿಂದಲೇ

ಈ ಘಟನೆ ನಡೆದಿದೆ ಎಂಬ ಬಗ್ಗೆ ಮಾಹಿತಿ ಹರಿದಾಡುತ್ತಿದ್ದು ಆನೆಯ ಕುರಿತು ಖಚಿತ ಮಾಹಿತಿ ಲಭ್ಯವಾಗಿಲ್ಲ. ಶೃಂಗೇರಿ ಭಾಗದಿಂದ ಬೇರೆ ಆನೆಯೊಂದು ಬಂದಿದೆಯೋ ಅಥವಾ ಆಗುಂಬೆಯಲ್ಲಿ ವಾರದ ಹಿಂದೆ ಕಾಣಿಸಿಕೊಂಡಿದ್ದ ಒಂಟಿ ಆನೆಯೆ

ಈ ಮಾರ್ಗದಲ್ಲಿ ಬಂದಿದೆಯಾ ಎಂಬ ಕುತೂಹಲಕರ ಪ್ರಶ್ನೆ ವ್ಯಕ್ತವಾಗಿದೆ.ಮೃತಪಟ್ಟ ದುರ್ದೈವಿಗಳಿಬ್ಬರು ರೈತರಾಗಿದ್ದರು ಇನ್ನು ಈ ಘಟನೆ ಹಿನ್ನಲೆಯಲ್ಲಿ ರೈತರು ಹಾಗೂ ಸಾರ್ವಜನಿಕರು ಸರ್ಕಾರ ಹಾಗೂ ಅರಣ್ಯ ಇಲಾಖೆಯ ವಿರುದ್ಧ ಪ್ರತಿಭಟನೆಗೆ ಸಜ್ಜಾಗಿದ್ದಾರೆ ಎಂಬ ಮಾಹಿತಿ ಮಾಧ್ಯಮಕ್ಕೆ ಲಭ್ಯವಾಗಿದೆ.


