ಕರ್ನಾಟಕ ರಾಜ್ಯ ಭಾಷೆ, ನೆಲ ಜಲ ಉಳಿಸಿ ಹೋರಾಟ ಸಮಿತಿಯಿಂದ ಪುರಸ್ಕಾರ – ಜೆಡಿಎಸ್ ಯುವ ನಾಯಕನಿಗೆ ಒಲಿದ ಪ್ರಶಸ್ತಿಯ ಗರಿ

ತೀರ್ಥಹಳ್ಳಿ : ದಿ. 03ರ ಸೋಮವಾರದಂದು ತಾಲೂಕಿನ ಶಾಂತವೇರಿ ಗೋಪಾಲಗೌಡ ರಂಗ ಮಂದಿರದಲ್ಲಿ ಕರ್ನಾಟಕ ರಾಜ್ಯ ಭಾಷೆ, ನೆಲ ಜಲ ಉಳಿಸಿ ಹೋರಾಟ ಸಮಿತಿಯಿಂದ ರಾಜ್ಯದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಕರ್ನಾಟಕ ರಾಜ್ಯ ವೀರ ಕನ್ನಡಿಗ ಪ್ರಶಸ್ತಿ ನೀಡಿ ಗೌರವಿಸಿದ್ದು, ಇದರಂತೆ ಜೆ ಡಿ ಎಸ್ ಯುವ ನಾಯಕರು ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಗಳಾದ ಕಟ್ಟೆ ಪ್ರವೀಣ್ ಇವರು ಆಸ್ಪತ್ರೆಯಲ್ಲಿನ ಕುಂದು ಕೊರತೆಗಳ ಬಗ್ಗೆ ಧ್ವನಿ ಎತ್ತಿ, ಮತ್ತು ರಕ್ತದ ಅವಶ್ಯಕತೆ ಇರುವವರಿಗೆ ಸ್ಪಂದಿಸಿದವರು.ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರ ಸ್ವಾಮಿಯವರಿಗೆ ಆಪ್ತರಾಗಿದ್ದು ಸ್ವತಃ ಕುಮಾರ ಸ್ವಾಮಿಯವರು ಪಂಚ ರತ್ನ ಯಾತ್ರೆ ಸಮಯದಲ್ಲಿ ಪ್ರವೀಣ್ ಮನೆಗೆ ಭೇಟಿ ನೀಡಿದ್ದು, ವಾತ್ಸವ್ಯ ಮಾಡಿದ್ದಾರೆ. ಜೊತೆಗೆ ರಾಷ್ಟ್ರೀಯ ಪಕ್ಷಗಳ ಮುಖಂಡರ ಸ್ನೇಹ ಸಂಪಾದಿಸಿದ್ದಾರೆ. ಕೋಣಂದೂರು, ರಿಪ್ಪನ್ ಪೇಟೆ ಸೇರಿದಂತೆ ಶಿವಮೊಗ್ಗದ ಹಲವೆಡೆ ಜನ ಮನ ಗೆದ್ದವರು, ಎಲೆಮರೆಕಾಯಂತಿದ್ದ ಇವರನ್ನು ರಾಜ್ಯಾಧ್ಯಕ್ಷರಾದ ಕುಣಜೆ ಮಂಜುನಾಥ್ ಗುರುತಿಸಿ ವೀರ ಕನ್ನಡಿಗ ಪ್ರಶಸ್ತಿ ನೀಡಿ ಅಭಿನಂದಿಸಿದ್ದಾರೆ.ಈ ವೇಳೆ ಮಾಜಿ ಶಿಕ್ಷಣ ಸಚಿವರಾದ ಕಿಮ್ಮನೆ ರತ್ನಾಕರ್, ಶ್ರುತಿ ಬಂಡೆ ವೆಂಕಟೇಶ್, ಇಮ್ತಿಯಾಜ್ ಹಾಗೂ ಸ್ಥಳೀಯರು ಸಾಹಿತ್ಯಭಿಮಾನಿಗಳು ಇದ್ದರು.

Leave a Reply

Your email address will not be published. Required fields are marked *