


ತೀರ್ಥಹಳ್ಳಿ : 2025-26 ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯ “ಎಲೆ ಚುಕ್ಕಿ ರೋಗ ನಿಯಂತ್ರಣೆ ಕಾರ್ಯಕ್ರಮ”ದಡಿ ಅರ್ಕಾ ಮೈಕ್ರೋಬಿಯಲ್ ಕಂನ್ಸಾರ್ಷಿಯಂ-AMC (ಸೂಕ್ಷ್ಮಾಣು ಜೀವಿಗಳ ಸಮೂಹ) ವನ್ನು ಉಚಿತವಾಗಿ ವಿತರಿಸಲು ಅವಕಾಶವಿದ್ದು, ತೀರ್ಥಹಳ್ಳಿ ತಾಲ್ಲೂಕಿನ ಎಲ್ಲಾ ವರ್ಗದ ರೈತರಿಂದ ಅರ್ಜಿಯನ್ನು ಕರೆಯಲಾಗಿದೆ.

ಮಾರ್ಗಸೂಚಿಯಾನುಸಾರ ಪ್ರತಿ ಎಕರೆಯ ಅಡಿಕೆ ಕ್ಷೇತ್ರಕ್ಕೆ ಗರಿಷ್ಠ 600/- ರೂಗಳ ಮೊತ್ತದ ಹಾಗೂ ಪ್ರತಿ ಫಲಾನುಭವಿಯು ಗರಿಷ್ಠ 5 ಎಕರೆ ಅಡಿಕೆ ಕ್ಷೇತ್ರಕ್ಕೆ 3000/- ರೂಗಳ ಮೊತ್ತದ ಅರ್ಕಾ ಮೈಕ್ರೋಬಿಯಲ್ ಕಂನ್ಸೋರ್ಷಿಯಂ ಅನ್ನು ಪಡೆಯಬಹುದಾಗಿದೆ. ಅರ್ಕಾ ಮೈಕ್ರೋಬಿಯಲ್ ಕಂನ್ಸಾರ್ಷಿಯಂ-AMC (ಸೂಕ್ಷ್ಮಾಣು ಜೀವಿಗಳ ಸಮೂಹ) ವನ್ನು ಪಡೆಯಲಿಚ್ಚಿಸುವ ರೈತರು ತೀರ್ಥಹಳ್ಳಿ ತಾಲ್ಲೂಕಿನ ತೋಟಗಾರಿಕೆ ಇಲಾಖೆ ಕಛೇರಿಯಲ್ಲಿ ದಿನಾಂಕ: 15-11-2025 ರೊಗಳಿಗೆ ಅರ್ಜಿಯನ್ನು ಸಲ್ಲಿಸಲು ಕೋರಿದೆ. ಜೇಷ್ಠತೆಯ ಅನುಸಾರ ವರ್ಗವಾರು ಲಭ್ಯವಿರುವ ಪ್ರಮಾಣದ ಅನುಸಾರ ಈ ಅರ್ಕಾ ಮೈಕ್ರೋಬಿಯಲ್ ಕಂನ್ಸಾರ್ಷಿಯಂ- AMC (ಸೂಕ್ಷ್ಮಾಣು ಜೀವಿಗಳ ಸಮೂಹ) ಯನ್ನು ಎಲ್ಲಾ ವರ್ಗದ ರೈತರಿಗೆ ವಿತರಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಕರ ಕಛೇರಿ, ಕುಶಾವತಿ, ತೀರ್ಥಹಳ್ಳಿಯಲ್ಲಿ ಸಂಪರ್ಕಿಸಲು ಅಥವಾ ಸಂಬಂದಿಸಿದ ಹೋಬಳಿಯ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಲು ಕೋರಿದೆ.

ಅರ್ಕಾ ಮೈಕ್ರೋಬಿಯಲ್ ಕಂನ್ಸಾರ್ಷಿಯಂ- AMC (ಸೂಕ್ಷ್ಮಾಣು ಜೀವಿಗಳ ಸಮೂಹ) ಗೆ ರೈತರು ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳು
- ಅರ್ಜಿ ನಮೂನೆ 01-04-2025 ನಂತರದ RTC ( ಅಡಿಕೆ ಬೆಳೆ ನಮೂದಾಗಿರಬೇಕು) ಬೆಳೆ ನಮೂದಾಗಿರದಿದ್ದಲ್ಲಿ ಕಂದಾಯ ಇಲಾಖೆಯಿಂದ ಬೆಳೆ ದೃಡೀಕರಣ ಪತ್ರವನ್ನು ಪಡೆದು ಸಲ್ಲಿಸುವುದು.
- ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ
- ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಪ್ರತಿ (ಮುಖ ಪುಟ)
- RTC (ಪಹಣಿ) ಯು ಜಂಟಿ ಖಾತೆಯಾಗಿದ್ದಲ್ಲಿ 100 ರೂಗಳ ಬಾಂಡ್ ಪೇಪರ್ ನಲ್ಲಿ ಒಪ್ಪಿಗೆ ಪತ್ರ ಸಲ್ಲಿಸುವುದು (ನೋಟರಿ ಕಡ್ಡಾಯ)SC/ST ಫಲಾನುಭವಿಯಾಗಿದ್ದಲ್ಲಿ RD ನಂಬರ್ ಇರುವ ಜಾತಿ



