
ಮನನೊಂದು ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ – ಹುಟ್ಟೂರಲ್ಲಿ ನೀರವ ಮೌನ
ಶಿವಮೊಗ್ಗ /ಬೆಂಗಳೂರು : ತೀರ್ಥಹಳ್ಳಿ ತಾಲೂಕಿನ ಆಗುಂಬೆ ಹೋಬಳಿಯ ಮೇಗರವಳ್ಳಿ ಸಮೀಪದ ಬಗ್ಗೋಡಿಗೆ ಗ್ರಾಮದ ಭೋಜರಾಜ್ ಹಾಗೂ ವನಜಾಕ್ಷಿ ಪುತ್ರ ಪ್ರಜ್ವಲ್ (28) ಬೆಂಗಳೂರಿನಲ್ಲಿ ಬ್ಯಾಂಕ್ ಉದ್ಯೋಗಿಯಾಗಿದ್ದು, ಮನನೊಂದು ಶನಿವಾರ ಲಾಡ್ಜ್ ಒಂದರಲ್ಲಿ 2 ಗಂಟೆಗಳ ಕಾಲ ಬಾಡಿಗೆಗೆ ರೂಮ್ ಪಡೆದಿದ್ದು ನಂತರ ಆತ್ಮ ಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.

ಇತ್ತೀಚೆಗಸ್ಟೇ ಉದ್ಯೋಗ ಸಿಕ್ಕಿದ್ದು ಯಾರ ಜೊತೆಗೆ ಸೇರದೇ ತನ್ನ ಕೆಲಸ ಹಾಗೂ ಮನೆ ಅಂತಿದ್ದ ಹುಡುಗ ಇನ್ನಿಲ್ಲ ಎಂಬುದು ಆತನ ಕುಟುಂಬಕ್ಕೆ ಸಿಡಿಲು ಬಡಿದಂತಾಗಿದೆ. ಪ್ರಕರಣ ಮೆಜೆಸ್ಟಿಕ್ ನ ಉಪ್ಪಾರ ಪೇಟೆ ಠಾಣೆಯಲ್ಲಿ ದಾಖಲಾಗಿದ್ದು ನಂತರದ ವಿಕ್ಟೋರಿಯ ಆಸ್ಪತ್ರೆಗೆ ಮೃತ ಪಾರ್ಥವ ಶರೀರ ಕೊಂಡೋಯ್ಯಲಾಗಿದೆ.ಸದ್ಯ ಯುವಕನ ಸಾವಿಗೆ ನಿಖರವಾದ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.ಸಂಜೆ ವೇಳೆಗೆ ಹುಟ್ಟೂರಿಗೆ ತರುವಂತ ವ್ಯವಸ್ಥೆ ನಡೆಯುತಿದೆ ಎಂದು ಮೂಲಗಳು ತಿಳಿಸಿವೆ.


