
ತೀರ್ಥಹಳ್ಳಿ:ತಾಲ್ಲೂಕಿನ ಆಗುಂಬೆ ಹೋಬಳಿ ಶೀರೂರು ಗ್ರಾಮದ ಸ.ನಂ.76 ರ ಅಕ್ರಮ ಒತ್ತುವರಿಯನ್ನು ತೆರವುಗೊಳಿಸುವ ಬಗ್ಗೆ ಈಗಾಗಲೇ ಗ್ರಾಮಸ್ಥರು ಮನವಿ ಮಾಡಿದ್ದು ಇದರಂತೆ ಉಲ್ಲೇಖ (2) ರವರ ವರದಿಯಂತೆ ಶೀರೂರು ಗ್ರಾಮದ ಸ.ನಂ.76 ರಲ್ಲಿ ಸರ್ಕಾರಿ ಜಮೀನಿನಲ್ಲಿ ಶೀರೂರು ಗ್ರಾಮದ ಗಿರೀಶ್ ಬಿನ್ ಸಣ್ಣಪ್ಪ ಇವರು ಸರ್ಕಾರಿ ಜಾಗಕ್ಕೆ ಕಲ್ಲು ಕಂಬ ಹಾಗೂ ಶೆಡ್ ನ್ನು ನಿರ್ಮಿಸಿ ಅನಧೀಕೃತವಾಗಿ ಒತ್ತುವರಿ ಮಾಡಿರುವುದು ಕಂಡುಬಂದ ಹಿನ್ನಲೆ ಒತ್ತುವರಿ ಬಗ್ಗೆ ಗಮನಕ್ಕೆ ತಂದಿದ್ದು

ಹಾಗೆಯೇ ಸಮಯವಕಾಶ ಕೂಡ ನೀಡಿದ್ದು, ಇದೀಗ ನ 12 ರಂದು ತೀರ್ಥಹಳ್ಳಿ ತಹಶೀಲ್ದಾರ್ ರವರ ಆದೇಶದಂತೆ ಆಗುಂಬೆ ಪೊಲೀಸರ ಜೊತೆಗೆ ಕಂದಾಯ ಇಲಾಖೆಯ ಅಧಿಕಾರಿಗಳು ಒತ್ತುವರಿ ಮಾಡಿರುವ ಪ್ರದೇಶವನ್ನು ಕರ್ನಾಟಕ ಭೂ ಕಂದಾಯ ಕಾಯ್ದೆ 1964 5 2 104 ರ ಅನ್ವಯ ತೆರವುಗೊಳಿಸಲಾಯಿತು.

ಈ ಹಿಂದೆ ಕೂಡ ಈ ಬಗ್ಗೆ ಸತ್ಯಶೋಧ ಮಾಧ್ಯಮ ವರದಿ ಬಿತ್ತರಿಸಿತ್ತು ಜೊತೆಗೆ ಊರಿನ ಪ್ರಮುಖರು ಹಾಗೂ ಗ್ರಾಮಸ್ಥರು ಒತ್ತುವರಿ ತೆರವುಗೊಳಿಸಿ ನ್ಯಾಯ ದೊರಕಿಸಿಕೊಟ್ಟ ಹಿನ್ನಲೆ ತಹಶೀಲ್ದಾರ್ ರಂಜಿತ್ ಹಾಗೂ ಕಂದಾಯ ಅಧಿಕಾರಿಗಳಿಗೆ ಹಾಗೂ ಆಗುಂಬೆ ಪೊಲೀಸ್ ಠಾಣೆಯ ಸಿಬ್ಬಂದಿಗಳಿಗೆ ಸತ್ಯಶೋಧ ನ್ಯೂಸ್ ಮಾಧ್ಯಮದ ಮೂಲಕ ಧನ್ಯವಾದ ಅರ್ಪಿಸಿದರು.

