

ತೀರ್ಥಹಳ್ಳಿ : ತಾಲೂಕಿನ ಬೆಜ್ಜವಳ್ಳಿಯ ಮುಖ್ಯರಸ್ತೆಯಲ್ಲಿ ಬೈಕ್ ಸವಾರ ಹಾಗೂ ಡಿಸೇಲ್ ಟ್ಯಾಂಕರ್ ಲಾರಿ ನಡುವೆ ಬೀಕರ ಅಪಘಾತ ಸಂಭವಿಸಿದ್ದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಅರಣ್ಯ ಇಲಾಖೆಯಲ್ಲಿ ಕ್ಷೇಮಾಭಿವೃದ್ಧಿ ನೌಕರರಾಗಿ ಕಾರ್ಯನಿರ್ವಹಿಸುತ್ತಿದ್ದ ವೆಂಕಟೇಶ್ (𝟓𝟗) ಎನ್ನುವ ಕುಡುವಳ್ಳಿ ಹಿರೇಬೇಯ್ಲಿ ನ ವ್ಯಕ್ತಿ ಮೃತ ದುರ್ದೇವಿ.

ಮಂಗಳೂರಿನ ಡಿಸೇಲ್ ಟ್ಯಾಂಕರ್ ಲಾರಿ ಬೆಜ್ಜವಳ್ಳಿ ಸಮೀಪ ಬಂದಾಗ ಏಕಾಏಕಿ ಅರಣ್ಯ ಇಲಾಖೆಯ ನೌಕರ ಎದುರಾದಾಗ ಈ ಘಟನೆ ಸಂಭವಿಸಿದ್ದು ಮಾಳೂರು ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.

