ತೀರ್ಥಹಳ್ಳಿ : ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲವೆಡೆ ಹೊಂಡ ಗುಂಡಿಗಳು ಬಿದ್ದ ಹಿನ್ನಲೆಯಲ್ಲಿ ಸಾರ್ವಜನಿಕರಿಂದ ಪಟ್ಟಣ ಪಂಚಾಯಿತಿಗೆ ದೂರು ಬಂದಿದ್ದು ಇದನ್ನ ಏಪ್ರಿಲ್ ನಲ್ಲಿ ಟೆಂಡರ್ ಆಗಿದ್ದು ಮಳೆಯ ಕಾರಣ ಟೆಂಡರ್ ಪ್ರಕ್ರಿಯೆಯನ್ನ ಸ್ಥಗಿತಗೊಳಿಸಲಾಗಿತ್ತು ಆದರೆ ಇದೀಗ ಬಿಸಿಲು ಬಿದ್ದ ಹಿನ್ನಲೆ ಕಾಮಗಾರಿಗೆ ಚಾಲನೆ ನೀಡಲಾಗಿದ್ದು ಅಂದಾಜು 5ಲಕ್ಷ ವೆಚ್ಚದಲ್ಲಿ ಮಾಡಲಾಗುತ್ತಿದೆ.

ಇದರ ಜೊತೆ ಜೊತೆಗೆ ಗಾಂಧಿನಗರದ ಚರಂಡಿ ಕಾಮಗಾರಿ, ಕೋದಂಡರಾಮ ದೇವಸ್ಥಾನದ ರಸ್ತೆ ಕಾಮಗಾರಿ, ವಾಲಿಬಾಲ್ ಕೋರ್ಟಿನ ಫೆನ್ಸಿಂಗ್ ಕಾಮಗಾರಿಗಳು ನಡೆಯುತ್ತಿದ್ದು ಪ್ರಗತಿಯಲ್ಲಿರುವ ಕಾಮಗಾರಿಗಳನ್ನುವೀಕ್ಷಿಸಲಾಯಿತು ಪಟ್ಟಣ ಪಂಚಾಯಿತಿ ಅಧ್ಯಕ್ಷ ರೆಹಮತ್ ಉಲ್ಲ ಅಸಾದಿ ವೀಕ್ಷಿಸಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿಯ ಸದಸ್ಯರಾದ ಸುಶೀಲಾ ಶೆಟ್ಟಿ , ಮುಖ್ಯಧಿಕಾರಿ ಡಿ ನಾಗರಾಜ್,ಕಿರಿಯ ಅಭಿಯಂತಕರಾದ ಸತೀಶ್, ಗುತ್ತಿಗೆದಾರರಾದ ವಿಜೇತ್ ಮತ್ತು ಅಜ್ಗರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *