ಶಿವಮೊಗ್ಗ : ಕಳೆದ ಆಯವ್ಯಯದಲ್ಲಿ ಅಡಿಕೆ ಎಲೆ ಚುಕ್ಕೆ ರೋಗಕ್ಕಾಗಿ ರೂ. 62.00 ಕೋಟಿ ರೂ ಗಳನ್ನು ಒದಗಿಸಿದ್ದಿರಿ ಇದಕ್ಕಾಗಿ ತಮಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.ಆದರೆ ಇಗ ಎಲೆಚುಕ್ಕೆ ರೋಗ ಉಲ್ಬಣಗೊಂಡು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ, ಸಾಗರ, ಹಾಗೂ ಶೃಂಗೇರಿ ಮುಂತಾದ ತಾಲ್ಲೂಕುಗಳಲ್ಲಿ ಅನೇಕ ರೈತರ ಅಡಿಕೆ ತೋಟಗಳೆ ನಾಶವಾಗಿವೆ, ಈ ರೋಗ ಮುಂದುವರೆಯುತ್ತಿದ್ದು, ರೈತರು ಕಂಗಾಲಾಗಿದ್ದಾರೆ.

ಇದುವರೆಗೆ ಅಧಿಕಾರಿಗಳು ಕೇವಲ ರೂ. 7.00 ಕೋಟಿ ಗಳನ್ನು ಬಿಡುಗಡೆ ಮಾಡಿದ್ದು, ಈ ಹಣ ರೈತರಿಗೆ ಯಾವುದಕ್ಕೂ ಸಾಕಾಗಿರುವುದಿಲ್ಲ.ಆದ್ದರಿಂದ ತಾವುಗಳು ದಯೆಮಾಡಿ ಅಷ್ಟು ಹಣವನ್ನು ಬಿಡುಗಡೆ ಮಾಡಿ ರೈತರು ಕಳೆದುಕೊಂಡ ತೋಟಗಳಿಗೆ ಪರಿಹಾರ ಕೊಡಿಸಲು ಹಣ ಬಿಡುಗಡೆಗೆ ಆರ್ಥಿಕ ಇಲಾಖೆಗೆ ಸೂಚಿಸಿ ರೈತರ ನೇರವಿಗೆ ಬರಬೇಕೆಂದು ಮನವಿ ಮಾಡಿದರು.

Leave a Reply

Your email address will not be published. Required fields are marked *